ವಿಶ್ವದ ಹಿರಿಯ ಪಾಂಡ 'ಪಾನ್ ಪಾನ್' ಇನ್ನಿಲ್ಲ
ಬೀಜಿಂಗ್, ಡಿ.31: ಸುಮಾರು 130ರಷ್ಟು ವಂಶಸ್ಥರನ್ನು ಹೊಂದಿದ್ದ ವಿಶ್ವದ ಅತ್ಯಂತ ಹಿರಿಯ ಪುರುಷ ಪಾಂಡ 'ಪಾನ್ ಪಾನ್' ತನ್ನ 31ನೇ ವಯಸ್ಸಿನಲ್ಲಿ ಕೊನೆಯುಸಿರೆಳೆಯಿತು.
ದೈತ್ಯ ಪಾಂಡಾಗಳಿಗೆ ಸಂತಾನೋತ್ಪತ್ತಿಯ ಸಾಮರ್ಥ್ಯ ಕಡಿಮೆಯಾಗಿರುವ ಕಾರಣ ಇವನ್ನು 'ಅಪಾಯವಿರುವ ಪ್ರಬೇಧಗಳು' ಎಂದು ಗುರುತಿಸಲಾಗಿದೆ. ಆದರೆ ಚೀನೀ ಭಾಷೆಯಲ್ಲಿ ಭರವಸೆ ಎಂಬ ಅರ್ಥಕೊಡುವ ಪಾನ್‌ಪಾನ್ ಪಾಂಡಾವು ಹಲವು ಮರಿಗಳಿಗೆ ತಂದೆಯಾಗಿತ್ತು ಮತ್ತು ಈ ಮರಿಗಳು ಸಂತಾನೋತ್ಪತ್ತಿ ಮಾಡಿ ಇದರ ವಂಶದ ಸದಸ್ಯರ ಸಂಖ್ಯೆ 131ಕ್ಕೂ ಹೆಚ್ಚಾಗಿತ್ತು. ಪಾನ್‌ಪಾನ್ ಪಾಂಡಾದ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಚೀನಾದ ದೈತ್ಯ ಪಾಂಡಾಗಳ ಸಂರಕ್ಷಣಾ ಕೇಂದ್ರ, ಅದು ಕ್ಯಾನ್ಸರ್‌ನಿಂದ ಬಳಲುತ್ತಿತ್ತು ಎಂದು ತಿಳಿಸಿದ್ದಾರೆ.
Next Story





