ನರ್ಮ್ ಸಾರಿಗೆಯಲ್ಲಿ ಹಿರಿಯರಿಗೆ ರಿಯಾಯಿತಿ
ಉಡುಪಿ, ಡಿ.31: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವ ರಾಜ್ಯದ 60 ವರ್ಷಗಳಿಗಿಂತ ಹೆಚ್ಚು ಪ್ರಾಯದ ಹಿರಿಯರಿಗೆ ಶೇ.25ರ ರಿಯಾಯಿತಿ ಸೌಲಭ್ಯವಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘ ತಿಳಿಸಿದೆ.
ಸಾಧಾರಣ, ವೇಗದೂತ ಮತ್ತು ರಾಜಹಂಸ ಬಸ್‌ಗಳಲ್ಲಿ ರಾಜ್ಯದಲ್ಲಿ, ಬೇರೆ ರಾಜ್ಯಗಳಿಗೆ ಹೋಗಲು, ಅಲ್ಲಿಂದ ಕರ್ನಾಟಕಕ್ಕೆ ಬರಲು ಈ ಸೌಲಭ್ಯದ ಪ್ರಯೋಜನ ಪಡೆಯಬಹುದು. ಅದೇ ರೀತಿ ನರ್ಮ್ ಸಾರಿಗೆ ಬಸ್‌ಗಳಲ್ಲೂ ಈ ಸೌಲಭ್ಯ ಪಡೆಯಬಹುದಾಗಿದೆ. ಪ್ರಾಯದ ದಾಖಲೆಗಾಗಿ ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿಯನ್ನು ತೋರಿಸಿದರೆ ಸಾಕು ಎಂದು ಸಂಘದ ಸಭೆಯಲ್ಲಿ ತಿಳಿಸಲಾಯಿತು.
ಸಂಘದ ಅಧ್ಯಕ್ಷ ಎಂ.ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ಕಾರ್ಯದರ್ಶಿ ಎಸ್.ಎಸ್.ತೋನ್ಸೆ ಸೌಲಭ್ಯದ ವಿಚಾರವಾಗಿ ಮಾತ ನಾಡಿದರು. ಪೀಟರ್ ರಫಾಯಲ್ ಅರನ್ಹಾ ಸ್ವಾಗತಿಸಿದರು. ಬಿ.ರವಿನಾಥ ಶೆಟ್ಟಿ ವಂದಿಸಿದರು.
Next Story





