ಪಡುಬಿದ್ರೆ: ನಾಳೆ ಸುನ್ನಿ ಸಂಗಮ
ಪಡುಬಿದ್ರೆ, ಡಿ.31: ಕೇರಳದ ಕುಟ್ಯಾಡಿಯಲ್ಲಿರುವ ಸಿರಾಜು ಹುದಾ ಇದರ ಬೆಳ್ಳಿಹಬ್ಬದ ಪ್ರಯುಕ್ತ ಪೇರೋಡ್ ಉಸ್ತಾದ್ ಮುನ್ನಡೆಸುವ ಸ್ನೇಹ ಸಂದೇಶ ಯಾತ್ರೆ ಹಾಗೂ ಸುನ್ನಿ ಸಂಗಮ ಪಡುಬಿದ್ರೆಯ ಜುಮಾ ಮಸೀದಿ ವಠಾರದಲ್ಲಿ ಜ.2ರಂದು ಮಧ್ಯಾಹ್ನ 1ಗಂಟೆಗೆ ನಡೆಯಲಿದೆ. ಸ್ವಾಗತ ಸಮಿತಿಯ ಅಧ್ಯಕ್ಷ ಪಿ.ಪಿ.ಅಹ್ಮದ್ ಸಖಾಫಿ ಕರ್ನಿರೆ ಅಧ್ಯಕ್ಷತೆ ವಹಿಸಲಿದ್ದು, ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಆಶೀರ್ವದಿಸುವರು. ಪಡುಬಿದ್ರೆ ಖತೀಬ್ ಎಸ್.ಎಂ.ಅಬ್ದುರ್ರಹ್ಮಾನ್ ಮದನಿ ದುಆ ನೆರವೇರಿಸಲಿದ್ದಾರೆ. ಮೂಳೂರು ಖತೀಬ್ ಅಬ್ದುರ್ರಹ್ಮಾನ್ ಮದನಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





