ಭಾರತೀಯ ಭೂ-ವಾಯು ಪಡೆಗಳ ನೂತನ ದಂಡನಾಯಕರಾಗಿ ರಾವತ್-ಧನೋವಾ ಅಧಿಕಾರಕ್ಕೆ
ಹೊಸದಿಲ್ಲಿ, ಡಿ.31: ಜನರಲ್ ಬಿಪಿನ್ ರಾವತ್ ಹಾಗೂ ಏರ್‌ಚೀಫ್ ಮಾರ್ಶಲ್ ಬೀರೇಂದ್ರ ಸಿಂಗ್ ಧನೋವಾ ಕ್ರಮವಾಗಿ ಭಾರತೀಯ ಭೂಸೇನೆ ಹಾಗೂ ವಾಯುಪಡೆಗಳ ದಂಡನಾಯಕರಾಗಿ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮನ ದಂಡನಾಯಕರಾದ ಜನರಲ್ ದಲ್ಬೀರ್ ಸಿಂಗ್ ಹಾಗೂ ಏರ್‌ಚೀಫ್ ಮಾರ್ಶಲ್ ಅರೂಪ್ ರಾಹಾ, ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.
ಜ.ರಾವತ್‌ಗೆ ಅಧಿಕಾರ ಹಸ್ತಾಂತರಿಸುವ ಮುನ್ನ ಸೌತ್ ಬ್ಲಾಕ್‌ನ ಹುಲ್ಲು ಹಾಸಿನಲ್ಲಿ ಜ. ಸಿಂಗ್‌ಗೆ ಗೌರವ ರಕ್ಷೆ ನೀಡಲಾಯಿತು.
ವಾಯುಪಡೆಯ ಮುಖ್ಯಾಲಯವಿರುವ ವಯುಭವನದಲ್ಲಿ ನಿರ್ಗಮನ ವರಿಷ್ಠ ರಾಹಾ ಹಾಗೂ ನೂತನ ಏರ್‌ಚೀಫ್ ಮಾರ್ಶಲ್ ಬಿ.ಎಸ್. ಧನೋವಾರಿಗೆ ಗೌರವ ರಕ್ಷೆ ನೀಡಲಾಯಿತು.
ಸರಕಾರವು ಹೊಸ ನೇಮಕಾತಿಗಳನ್ನು ಡಿ.16ರಂದು ಘೋಷಿಸಿತ್ತು.
Next Story





