Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಜಂಗ್ ನಿರ್ಗಮನ ಏಕೆ?

ಜಂಗ್ ನಿರ್ಗಮನ ಏಕೆ?

ವಾರ್ತಾಭಾರತಿವಾರ್ತಾಭಾರತಿ1 Jan 2017 12:10 AM IST
share
ಜಂಗ್ ನಿರ್ಗಮನ ಏಕೆ?

ಜಂಗ್ ನಿರ್ಗಮನ ಏಕೆ?
ಅನಿಲ್ ಬೈಜಾಲ್ ದಿಲ್ಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಳ್ಳಲಿದ್ದಾರೆ. ಆದರೆ ಹಿಂದೆ ಆ ಹುದ್ದೆಯಲ್ಲಿದ್ದ ನಜೀಬ್ ಜಂಗ್ ರಾಜೀನಾಮೆ ನೀಡಿದ್ದು ಏಕೆ ಎನ್ನುವುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಮಹತ್ವದ ಪಾತ್ರವನ್ನು ನಿರ್ವಹಿಸಲು ಅಗತ್ಯವಾಗುವಂತೆ ಜಂಗ್ ಕೆಲವೊಂದು ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಕೆಲವರ ಅಂಬೋಣ. ಅಂದರೆ ಉಪರಾಷ್ಟ್ರಪತಿಯಾಗಲು ಈ ಸಿದ್ಧತೆ ಎಂಬ ಅನಿಸಿಕೆ. ಇನ್ನೂ ಕೆಲವರ ಅನಿಸಿಕೆಯಂತೆ, ಲೆಫ್ಟಿನೆಂಟ್ ಗವರ್ನರ್‌ಗಳ ಅಧಿಕಾರವನ್ನು ಮೊಟಕುಗೊಳಿಸುವ ಆದೇಶವನ್ನು ಸುಪ್ರೀಂಕೋರ್ಟ್ ಜನವರಿಯಲ್ಲಿ ನೀಡುವ ನಿರೀಕ್ಷೆಯಿದ್ದು, ಜಂಗ್ ರಾಜೀನಾಮೆ ಮೂಲಕ ಸಕಾಲಿಕವಾಗಿ ಈ ತೂಗುಗತ್ತಿಯಿಂದ ಬಚಾವ್ ಆಗಿದ್ದಾರೆ. ಕೇಂದ್ರ ಸರಕಾರಕ್ಕೆ ನಿಕಟವಾಗಿರುವ ಬೈಜಾಲ್, ಈ ಹೊಸ ಹುದ್ದೆಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಊಹೆಗಳು ನಡೆಯುತ್ತಿವೆ. ಆದರೆ ಮುಂದಿನ ತಿಂಗಳುಗಳಲ್ಲಿ ದಿಲ್ಲಿಯಲ್ಲಿ ದೊಡ್ಡ ರಾಜಕೀಯ ಪ್ರಹಸನಗಳು ನಡೆಯುವುದಂತೂ ಖಚಿತ.

ರೇಸ್‌ನಲ್ಲಿ ಸುಶ್ಮಾ!
ರಾಜಧಾನಿಯ ಗಮನ ನಿಧಾನವಾಗಿ ನೋಟುಬಂಧಿಯಿಂದ ರಾಷ್ಟ್ರಪತಿ ಚುನಾವಣೆಯತ್ತ ಹೊರಳುತ್ತಿದೆ. ದೇಶದ ಅತ್ಯುನ್ನತ ಹುದ್ದೆಯ ಚುನಾವಣೆಗೆ ಏಳು ತಿಂಗಳಷ್ಟೇ ಬಾಕಿ. ದೇಶದ ಶಕ್ತಿಕೇಂದ್ರದಲ್ಲಿ ಸಹಜವಾಗಿಯೇ ಈ ಹುದ್ದೆಯ ಆಕಾಂಕ್ಷಿಗಳು ಹಾಗೂ ಅವರ ಲೆಕ್ಕಾಚಾರಗಳ ಬಗ್ಗೆ ಊಹಾಪೋಹಗಳು ಗರಿಗೆದರಿವೆ. ಇತ್ತೀಚೆಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಶ್ಮಾ ಸ್ವರಾಜ್ ಅವರ ಹೆಸರೂ ಹರಿದಾಡುತ್ತಿದೆ. ಭಾರತೀಯ ಜನತಾ ಪಕ್ಷ, ಸಂಘ ಪರಿವಾರ ಹಾಗೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ ಅಪಾರ ಬೆಂಬಲಿಗರನ್ನು ಸುಶ್ಮಾ ಹೊಂದಿದ್ದಾರೆ. ಇವರ ಉಮೇದುವಾರಿಕೆ ಎನ್‌ಡಿಎ ಹೊರತಾದ ಪ್ರಾದೇಶಿಕ ಪಕ್ಷಗಳಿಂದ, ಈಶಾನ್ಯ ರಾಜ್ಯಗಳಿಂದಲೂ ಮತ ಪಡೆಯುವ ನಿರೀಕ್ಷೆ ಇದೆ. ಆದರೆ ಮಾರ್ಗದರ್ಶಕ ಮಂಡಳಿಯ ಮುಂಚೂಣಿಯಲ್ಲಿರುವ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಯಶವಂತ ಸಿನ್ಹಾ ಕೂಡಾ ಗದ್ದುಗೆ ನಿರೀಕ್ಷೆಯಲ್ಲಿದ್ದಾರೆ. ಆದರೆ ಸುಶ್ಮಾ ಬಹುಶಃ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶದವರೆಗೂ ಕಾಯಬೇಕು. ಇಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸೋಲು ಅಥವಾ ಗೆಲುವು, ಆಡಳಿತಾರೂಢ ಮೈತ್ರಿಕೂಟದ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಕೂಡಾ ಎರಡನೆ ಅವಧಿಯ ನಿರೀಕ್ಷೆಯಲ್ಲಿದ್ದಾರೆ. ಅವರ ಬೌದ್ಧಿಕ ಮಾರ್ಗದರ್ಶನವನ್ನು ಪ್ರಧಾನಿ ಮೋದಿ ಕೂಡಾ ಇಚ್ಛಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸದಾ ರಾಷ್ಟ್ರಪತಿಗಳ ಆಯ್ಕೆಗೆ ಮಾನದಂಡವಾಗುವುದು ರಾಜಕೀಯವೇ ವಿನಃ ಅವರ ಅರ್ಹತೆ ಅಲ್ಲ.

ತಲೆಮಾರುಗಳ ಗುದ್ದಾಟ
ಕಾಂಗ್ರೆಸ್ ಪಕ್ಷ ಐತಿಹಾಸಿಕ ತಲೆಮಾರು ವರ್ಗಾಂತರದ ಕಾಲಘಟ್ಟದಲ್ಲಿದೆ. ರಾಹುಲ್‌ಗಾಂಧಿ ಪಕ್ಷದ ಅತ್ಯುನ್ನತ ಹುದ್ದೆ ವಹಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಕಾಂಗ್ರೆಸ್‌ನ ಯುವಪಡೆ ಹಳೆ ನಾಯಕತ್ವಕ್ಕೆ ಸೊಪ್ಪು ಹಾಕುತ್ತಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ಪಕ್ಷದ ಉಪಾಧ್ಯಕ್ಷರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನಡೆಸಿಕೊಂಡ ರೀತಿಯಿಂದ ಇದು ಸ್ಪಷ್ಟವಾಗುತ್ತದೆ. ಖರ್ಗೆ ಸ್ವಲ್ಪತಡವಾಗಿ ಆಗಮಿಸಿದರು. ಆದರೆ ಅವರ ಆಗಮನಕ್ಕೆ ರಾಹುಲ್ ಕಾಯಲಿಲ್ಲ. ಹಿರಿಯರಾದ ಖರ್ಗೆಗೆ ಜಾಗ ಬಿಟ್ಟುಕೊಡುವಂತೆ ಪಕ್ಷದ ಮುಖಂಡರು ಯಂಗ್ ಟರ್ಕ್ ನಾಯಕರಿಗೆ ಮನವಿ ಮಾಡಿಕೊಳ್ಳಬೇಕಾಯಿತು. ಆದರೆ ಇದಕ್ಕೆ ಹಳೆಪೀಳಿಗೆಯವರು ಹೇಗೆ ಸೇಡು ತೀರಿಸಿಕೊಳ್ಳುತ್ತಾರೆ ಎನ್ನುವ ಕದನ ಕುತೂಹಲ ಎಲ್ಲರಲ್ಲೂ ಮೂಡಿದೆ.

ಪ್ರಭು ಸರಣಿ ಅಪಘಾತ
ಇಂಧೋರ್- ಪಾಟ್ನ್ನಾ ಎಕ್ಸ್‌ಪ್ರೆಸ್ ರೈಲು ಕಾನ್ಪುರ ಬಳಿ ಅಪಘಾತಕ್ಕೀಡಾದ ಘಟನೆಯ ಬಳಿಕ, ರೈಲ್ವೆ ಸಚಿವ ಸುರೇಶ್ ಪ್ರಭು ಉತ್ತರಪ್ರದೇಶಕ್ಕೆ ನಿರಂತರ ಭೇಟಿ ನೀಡುತ್ತಿರುವುದು ಬಿಟ್ಟಿಲ್ಲ. ಇದು ಚುನಾವಣೆಯ ಸಂದರ್ಭ ಅಲ್ಲದಿರುವುದರಿಂದ ರೈಲ್ವೆ ಸಚಿವರು ಇಷ್ಟೊಂದು ಸಮಯವನ್ನು ಉತ್ತರ ಪ್ರದೇಶದಲ್ಲಿ ವ್ಯಯಿಸುವುದು ಸಮಂಜಸವಲ್ಲ ಎಂಬ ಅನಿಸಿಕೆ ಹಲವರದ್ದು. ಇಂಥ ಸಿದ್ಧಾಂತಗಳ ಪ್ರತಿಪಾದಕರಿಗೆ ಅವರದ್ದೇ ಕಾರಣಗಳು ಇರಬಹುದು. ಉತ್ತರ ಪ್ರದೇಶಕ್ಕೆ ಸಂಬಂಧಿಸಿದ ರೈಲ್ವೆ ಯೋಜನೆಗಳನ್ನು ಆದ್ಯತೆ ಮೇಲೆ ಪ್ರಭು ಅನುಮೋದಿಸುತ್ತಿದ್ದಾರೆ ಎಂಬ ಮಾತು ರೈಲು ಭವನದಲ್ಲಿ ಕೇಳಿಬರುತ್ತಿದೆ. ಅವರು ಉತ್ತರ ಪ್ರದೇಶದಲ್ಲಿ ನಡೆಸುವ ಸಾರ್ವಜನಿಕ ಸಭೆಗಳಲ್ಲಿ ಭಾಷಣವನ್ನು ಅಂತಿಮವಾಗಿ 'ಜೈ ಮಹಾರಾಷ್ಟ್ರ' ಮಾದರಿಯಲ್ಲಿ 'ಜೈ ಉತ್ತರ ಪ್ರದೇಶ' ಎಂಬ ಘೋಷಣೆ ಮೂಲಕ ಮುಗಿಸುತ್ತಿದ್ದಾರೆ. ಪ್ರಧಾನಿಯ ಜತೆ ಹೇಗೆ ಸಲುಗೆಯಿಂದ ಇರಬೇಕು ಎಂಬ ಕಲೆ ಪ್ರಭುಗೆ ಚನ್ನಾಗಿ ತಿಳಿದಿದೆ.

ಬ್ಯುಸಿಯಾದ ಮೇನಕಾ ಗಾಂಧಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾಗಾಂಧಿ ಕಳೆದ ವರ್ಷವಿಡೀ ಸುದ್ದಿಯಲ್ಲಿದ್ದವರು. ಕೆಲ ಹೊಸ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಹಾಗೂ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮರಕ್ಕೆ ಮಗ ವರುಣ್ ಗಾಂಧಿ ಅವರನ್ನು ಪಕ್ಷದ ದಂಡನಾಯಕನಾಗಿ ಮಾಡುವ ಪ್ರಯತ್ನದ ಮೂಲಕ ಗಮನ ಸೆಳೆದಿದ್ದರು. ಆದರೆ ಅವರ ಎರಡನೇ ಗುರಿ ಕೈಕೊಟ್ಟಿತು. ಆದರೆ ಹೊಸ ವರ್ಷದಲ್ಲಿ ಅವರು ಸಚಿವಾಲಯದ ಹೊರಗಿನ ಚಟುವಟಿಕೆಗಳ ಮೂಲಕ ಸುದ್ದಿಯಲ್ಲಿರಲು ಬಯಸಿದಂತಿದೆ. ಮೊಮ್ಮಗಳ ಹೆಸರಿನ ಅನಸೂಯಾಸ್ ಗಾರ್ಡನ್, ಪ್ರಾಣಿ ಹಕ್ಕುಗಳ ಬಗ್ಗೆ ಅವರ ಲೇಖನಗಳ ಸಂಕಲನ, ಮಕ್ಕಳ ಕಾದಂಬರಿ ಹೀಗೆ ಹೊಸ ಕೃತಿಗಳು ಬಿಡುಗಡೆಯ ಹಾದಿಯಲ್ಲಿವೆ. ಈ ಎಲ್ಲ ಪುಸ್ತಕಗಳನ್ನು ಮುಂಚೂಣಿಗೆ ತರುವ ಜತೆಗೆ, ತೀರಾ ಹಿಂದೆ ಬಿಡುಗಡೆಯಾದ ಮಕ್ಕಳ ಹೆಸರಿನ ಕುರಿತ ಕೃತಿಯನ್ನು ಪರಿಷ್ಕರಿಸಲು ಕೂಡಾ ನಿರ್ಧರಿಸಿದ್ದಾರೆ. ಖಂಡಿತವಾಗಿಯೂ 2017ರಲ್ಲಿ ಮೇನಕಾ ಸುದ್ದಿಯಲ್ಲಿರುತ್ತಾರೆ. ಆದರೆ ಸಂಪೂರ್ಣವಾಗಿ ರಾಜಕೀಯ ಕಾರಣಗಳಿಗೆ ಅಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X