ನಿವೃತ್ತ ಪೌರ ಕಾರ್ಮಿಕರಿಗೆ ಸನ್ಮಾನ

ಬೆಳ್ತಂಗಡಿ, ಜ.1: ಬೆಳ್ತಂಗಡಿ ಪಪಂನಲ್ಲಿ ಕಳೆದ 32ವರ್ಷದಿಂದ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮೋಂಟ ಅವರನ್ನು ಬೆಳ್ತಂಗಡಿ ಪಪಂ ವತಿಯಿಂದ ಅಧ್ಯಕ್ಷ ಮುಗುಳಿ ನಾರಾಯಣರಾವ್ ಗೌರವಿಸಿದರು. ಈ ಸಂದರ್ಭ ಮುಖ್ಯಾಕಾರಿ ಜೆಸಿಂತಾ ಲೂವಿಸ್, ಉಪಾಧ್ಯಕ್ಷ ಜಗದೀಶ್ ಡಿ., ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಸದಸ್ಯರಾದ ಮಮತಾ ಶೆಟ್ಟಿ, ರಾಜೇಶ್, ಲ್ಯಾನ್ಸಿ ಪಿರೇರಾ, ಜನಾದರ್ನ ಬಂಗೇರ, ಶುಭಾ, ಮುಸ್ತರ್‌ಜಾನ್ ಮೆಹಬೂಬ್, ಇಂಜಿನಿಯರ್ ಮಹಾವೀರ ಅರಿಗ, ವೆಂಕಟರಮಣ ಶರ್ಮ, ಸಿಬ್ಬಂದಿ ಉಪಸ್ಥಿತರಿದ್ದರು.
Next Story





