ಮಾಜಿ ಸಚಿವ ಎಚ್.ಜಿ.ಗೋವಿಂದೇಗೌಡರ ಪತ್ನಿ ನಿಧನ

ಚಿಕ್ಕಮಗಳೂರು, ಜ.2: ಮಾಜಿ ಶಿಕ್ಷಣ ಸಚಿವ ಎಚ್.ಜಿ.ಗೋವಿಂದೇಗೌಡ ಅವರ ಪತ್ನಿ ಶಾಂತಮ್ಮ (85) ಸೋಮವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಇವರು ಪುತ್ರ ಇತ್ತೀಚೆಗಷ್ಟೇ ಜೆಡಿಎಸ್ ಗೆ ಸೇರ್ಪಡೆಗೊಂಡ ಎಚ್.ಜಿ.ವೆಂಕಟೇಶ್ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ. ವರ್ಷದ ಹಿಂದಷ್ಟೇ ಎಚ್.ಜಿ.ಗೋವಿಂದೇಗೌಡರು ನಿಧನರಾಗಿದ್ದರು. ಕೊಪ್ಪ ತಾಲೂಕಿನ ಮಣಿಪುರ ಎಸ್ಟೇಟ್ ನಲ್ಲಿ ಮಗನ ಮನೆಯಲ್ಲಿ ವಾಸವಿದ್ದ ಶಾಂತಮ್ಮ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಸೋಮವಾರ ಸಂಜೆ ಮಣಿಪುರ ಎಸ್ಟೇಟ್ ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Next Story





