ಹೊಸವರ್ಷದಲ್ಲಿ ಶಬರಿ ಮಲೆಗೆ ಹರಿದು ಬಂತು ಭಕ್ತರ ಪ್ರವಾಹ

ಶಬರಿ ಮಲೆ, ಜ.2: ಹೊಸವರ್ಷದಲ್ಲಿ ಶಬರಿ ಮಲೆಗೆ ಭಕ್ತರ ಪ್ರವಾಹವೇ ಹರಿದು ಬಂದಿದೆ ಎಂದು ವರದಿಯಾಗಿದೆ. ಶನಿವಾರ ಆರಂಭವಾದ ಭಕ್ತರ ಪ್ರವಾಹ ಹತ್ತುಗಂಟೆಯವರೆಗೂ ಹರಿದು ಬಂದಿತ್ತು. ಕಳೆದವರ್ಷಕ್ಕೆ ಹೋಲಿಸಿದರೆ ಈಸಲ ಹೆಚ್ಚು ಭಕ್ತರು ಸನ್ನಿಧಾನಕ್ಕೆ ಬಂದಿದ್ದಾರೆ. ಬೆಳಗ್ಗೆ ಆರಂಭವಾದ ತುಪ್ಪಾಭಿಷೇಕ ಮಧ್ಯಾಹ್ನವರೆಗೂ ಮುಂದುವರಿಯಿತು.
ಹೊರರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ವಿದೇಶದಲ್ಲಿರುವ ಭಾರತೀಯರು, ಅಂಧ್ರ,ಕರ್ನಾಟಕದ ಭಕ್ತರು ಹೊಸವರ್ಷದಲ್ಲಿ ಬೆಟ್ಟ ಹತ್ತಿದರು.
ಸಾವಿರದಷ್ಟು ಪೊಲೀಸರಿಂದ ಕಾವಲು ಏರ್ಪಡಿಸಲಾಗಿತ್ತು. ವಾಧ್ಯಘೋಷಗಳು, ಶರಣುಕೂಗುಗಳು, ಸಿಹಿ ಹಂಚುವಿಕೆ ಇದ್ದವು. ನೀರು, ಅನ್ನದಾನ, ವಿಶ್ರಮಕ್ಕೆ ಸೌಕರ್ಯಏರ್ಪಡಿಸಲಾಗಿತ್ತು. ಕೋಲಾ ನಿಷೇಧ ಹಿನ್ನೆಲೆಯಲ್ಲಿ ತಂಪುಪಾನೀಯಗಳಿಗೂ ನಿಯಂತ್ರಣ ಹೇರಲಾಗಿತ್ತು. ಅಧಿಕಾರಿಗಳು ಹೆಚ್ಚು ಕುಡಿಯುವ ನೀರಿನ ಕೇಂದ್ರಗಳನ್ನು ಸ್ಥಾಪಿಸಿದ್ದರು ಎಂದು ವರದಿ ತಿಳಿಸಿದೆ.
Next Story





