ಕೋಣಾಜೆ: ಲಾರಿ ಚಾಲಕನಿಗೆ ಚೂರಿ ಇರಿತ

ಕೋಣಾಜೆ, ಜ.2: ಕೋಣಾಜೆಯ ಕಲ್ಕಟ್ಟ ಬಳಿ ಲಾರಿ ಚಾಲಕನೋರ್ವನಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಕಲ್ಲಾರಕೋಡಿಯ ರಫೀಕ್ ಇರಿತಕ್ಕೊಳಗಾದವರು. ಲಾರಿ ಚಾಲಕ ರಫೀಕ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
Next Story





