ಸೌದಿ ಅರೇಬಿಯ: ಎಟಿಎಂ ವಂಚನೆ; 6 ಮಂದಿಯ ಬಂಧನ

ಜಿದ್ದ,ಜ.2: ಬ್ಯಾಂಕ್ ಎಟಿಎಂಗಳಲ್ಲಿ ವಂಚನೆ ನಡೆಸಿದ ಆರುಮಂದಿ ಸಿರಿಯನ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಟಿಎಂ ವಂಚನೆಕುರಿತು ಹಲವಾರು ದೂರು ಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.
ಬಿಸಿನೆಸ್ ವೀಸಾದಲ್ಲಿ ಸೌದಿ ಅರೇಬಿಯ ಪ್ರವೇಶಿಸಿ ಇವರು ಎಟಿಎಂ ದೋಚುತ್ತಿದ್ದರು ಎಂದು ಪೊಲೀಸ್ ವಕ್ತಾರ ಅದಿ ಅಲ್ ಖುರೇಷಿ ಹೇಳಿದ್ದಾರೆ. ಎಟಿಎಂ ಬಳಕೆದಾರರ ಕಾರ್ಡ್‌ಮಾಹಿತಿ ಸೋರಿಕೆ ಮಾಡಿ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಳ್ಳುವ ಅನಧಿಕೃತ ಇಲೆಕ್ಟ್ರಾನಿಕ್ ವ್ಯವಸ್ಥೆ ಇವರ ಬಳಿಯಿತ್ತು.
ಇಂತಹ ವಂಚಕರನ್ನು ಸೆರೆಹಿಡಿಯಲು ಸೂಕ್ತ ಸುರಕ್ಷಾ ಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ವಕ್ತಾರ ಅದಿ ಅಲ್ ಖುರೇಷಿ ತಿಳಿಸಿದ್ದಾರೆಂದು ವರದಿಯಾಗಿದೆ.
Next Story





