ಒಮನ್: ಮಾದಕವಸ್ತು ಸಾಗಾಟಕ್ಕೆ ಯತ್ನಿಸಿದ ಮೂವರ ಬಂಧನ

ಮಸ್ಕತ್,ಜ.2: ಸಮುದ್ರಮಾರ್ಗವಾಗಿ ಮದ್ಯ, ಮಾದಕವಸ್ತುಗಳನ್ನು ಸಾಗಾಟ ನಡೆಸಲು ಯತ್ನಿಸಿದ ಮೂವರು ಏಷ್ಯನ್ ವಂಶೀಯರನ್ನು ಪೊಲೀಸರು ಬಂಧಿಸಿದ್ದಾರೆ. ದಬ್ಬಾ ಸಮುದ್ರ ದಾರಿಯಿಂದ ಬೋಟ್‌ನಲ್ಲಿ ಇವರು ಈ ಸಾಮಗ್ರಿಗಳ ಸಾಗಾಟ ನಡೆಸುತ್ತಿದ್ದರು. ಪೊಲೀಸ್ ಕಾವಲು ಪಡೆ ಇವರನ್ನು ಬಂಧಿಸಿದೆ. ಆರೋಪಿಗಳು ಹೆರಾಯಿನ್ ಮತ್ತು ಮದ್ಯವನ್ನು ಮಸ್ಕತ್‌ಗೆ ತರಲು ಯತ್ನಿಸುತ್ತಿದ್ದರು ಎಂದು ವರದಿ ತಿಳಿಸಿದೆ.
Next Story





