Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪ್ರಧಾನಿ ಬಗ್ಗೆ ಐವನ್ ಹೇಳಿಕೆ ‘ಅವಿವೇಕದ...

ಪ್ರಧಾನಿ ಬಗ್ಗೆ ಐವನ್ ಹೇಳಿಕೆ ‘ಅವಿವೇಕದ ಪರಮಾವಧಿ’ : ಕೋಟ ಶ್ರೀನಿವಾಸ ಪೂಜಾರಿ

ವಾರ್ತಾಭಾರತಿವಾರ್ತಾಭಾರತಿ2 Jan 2017 5:13 PM IST
share
ಪ್ರಧಾನಿ ಬಗ್ಗೆ ಐವನ್ ಹೇಳಿಕೆ  ‘ಅವಿವೇಕದ ಪರಮಾವಧಿ’ : ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು, ಜ.2 :  ಇಡೀ ಜಗತ್ತೇ ಗೌರವಿಸುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಜೈಲಿಗಟ್ಟುವ ಅವಹೇಳನದ ಮಾತಾಡುವ ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ರವರ ಹೇಳಿಕೆ ಮೂರ್ಖತನದ ಪರಮಾವಧಿ ಎಂದು ಶಾಸಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

ನೋಟು ರದ್ದತಿಯ ವಿಚಾರದಲ್ಲಿ ಪ್ರಧಾನಿಯನ್ನು ಗುರಿ ಮಾಡುವ ಮೊದಲು ಐವನ್, ದೇಶದಲ್ಲಿ ಒಟ್ಟು ಚಲಾವಣೆಯ ಶೇ.86 ರಷ್ಟು ಮೌಲ್ಯದ ನೋಟುಗಳನ್ನು ಅಪಮೌಲ್ಯಗೊಳಿಸಿದಾಗ ಭಾರತೀಯರು ಶೇ.90 ಮಂದಿ ಪ್ರಧಾನಿಯ ನಿರ್ಧಾರವನ್ನು ಸಾರ್ವತ್ರಿಕವಾಗಿ ಬೆಂಬಲಿಸಿದರು ಎನ್ನುವುದು ಅರ್ಥೈಸಿಕೊಳ್ಳಬೇಕು.

ಈ ಹಿಂದೆ ರಷ್ಯಾ, ಉತ್ತರಕೊರಿಯಾ, ಮ್ಯಾನ್ಮರ್ ನಂತಹ ದೇಶಗಳು ಕರೆನ್ಸಿ ನಿಷೇಧ ಮಾಡಿದಾಗ ಅಲ್ಲಿಯ ಜನ ವಿರೋಧಿಸಿದ್ದು, ಆಯಾಯ ದೇಶದ ಮುಖಂಡರ ಮೂಲ ಉದ್ದೇಶದ ಮೇಲೆ ವಿಶ್ವಾಸ ಕಳಚಿಕೊಂಡಿದ್ದರಿಂದ. ಆದರೆ ಭಾರತದ ಪ್ರಧಾನಿ ಮೋದಿಯವರ ನೋಟು ರದ್ಧತಿಯ ಹಿಂದೆ ಕಾಳಧನಿಕರನ್ನು ಮಟ್ಟ ಹಾಕುವುದು, ಖೋಟಾನೋಟುಗಳನ್ನು ನಿಯಂತ್ರಿಸುವುದು, ‘ಕಾಂಗ್ರೆಸ್ ಸರಕಾರದ ಉಡುಗೊರೆಯಾದ ಕಾಶ್ಮೀರದ ಕಣಿವೆಯಲ್ಲಿ ಹಣಕೊಟ್ಟು ದಂಗೆ ಮಾಡುವ ರಾಷ್ಟ್ರವಿರೋಧಿ ಶಕ್ತಿಗಳನ್ನು ತಡೆದು ಶಾಂತಿ ಕಾಪಾಡುವುದು’ ಎಂದು ಅರ್ಥೈಸಿಕೊಂಡ ಭಾರತೀಯರು ಮೋದಿ ಬೆಂಬಲಕ್ಕೆ ನಿಂತದ್ದು ಕಂಡೂ ಸಹ ಪ್ರಧಾನಿಯ ಬಗ್ಗೆ ಲಘು ಮಾತು ಶಬ್ಧ ಬಳಸುವುದು ಮುಖ್ಯ ಸಚೇತಕರ ಹುದ್ದೆಯ ಘನತೆಗೆ ತಕ್ಕುದ್ದಲ್ಲ ಎಂದು ಪೂಜಾರಿ ವ್ಯಂಗವಾಡಿದ್ದಾರೆ.

ದೇಶದ ಅರ್ಥವ್ಯವಸ್ಥೆ ಮತ್ತು ರಕ್ಷಣಾ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂಬುದು ಈ ನಾಡಿನ ಸತ್ಸಂಪ್ರದಾಯ. ಪಾಕಿಸ್ತಾನ ಗಡಿಯೊಳಗೆ ಕಣ್ಣುಮುಚ್ಚಾಲೆ ಆಡುವುದಕ್ಕೆ “ಸರ್ಜಿಕಲ್ ಸ್ಟ್ರೈಕ್” ರೂಪದಲ್ಲಿ ಪ್ರಧಾನಿಯವರು ಉತ್ತರ ಕೊಟ್ಟಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಬುಡಮೇಲೆ ಮಾಡುವ ಕಾಳಧನಿಕರನ್ನು ನಿಯಂತ್ರಿಸಲು ಮೋದಿ ದಿಟ್ಟ ನಿಲುವಿನಿಂದ ನೋಟು ಅಮಾನ್ಯ ಮಾಡಿದ ಹೆಜ್ಜೆಯನ್ನು “ಆರ್ಥಿಕ ಸರ್ಜಿಕಲ್ ಸ್ಟ್ರೈಕ್” ಎಂದು ಪ್ರತಿ ರಾಷ್ಟ್ರಪ್ರೇಮಿಯೂ ಸ್ವಾಗತಿಸುವಾಗ ಐವನ್ ರ ಹೇಳಿಕೆ ಅವರ ಬಗ್ಗೆ ವಿಚಾರಶೀಲರಲ್ಲಿ ಆತಂಕ ಮೂಡಿಸಿದೆ ಎಂದು ಕೋಟ ವಿವರಿಸಿದ್ದಾರೆ.

‘ನೋಟು ಅಪಮೌಲ್ಯವನ್ನು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಆರೋಗ್ಯ ಮಂತ್ರಿ ರಮೇಶ್ ಕುಮಾರ್ ಮತ್ತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪರವರು ಸಾರ್ವಜನಿಕವಾಗಿ ಸ್ವಾಗತಿಸಿದ ಉದ್ದೇಶವೇನೆಂದು ನಿಮ್ಮ ಹಿರಿಯರಿಂದ ಕೇಳಿ ತಿಳಿದುಕೊಳ್ಳಿ. ಕೇಂದ್ರ ಸರಕಾರದಿಂದ ಸಕಾಲದಲ್ಲಿ ನೋಟು ಬಿಡುಗಡೆಯಾದರೂ, ನಿಮ್ಮದೇ ಸರ್ಕಾರದ ಚಿಕ್ಕರಾಯಪ್ಪ ಮತ್ತು ಜಯಚಂದ್ರರಂತಹ ಅಧಿಕಾರಿಗಳ ಮೂಲಕ ಕಣ್ಣುಮುಚ್ಚಾಲೆಯಾಡಿ ಕರ್ನಾಟಕದಲ್ಲಿ ಜನರ ಕೈಗೆ ನೋಟು ಸಿಗದಂತೆ ಮಾಡಲೆತ್ನಿಸಿದವರು, ಕಾಂಗ್ರೆಸಿನ ನವನಾಯಕಿಯೋರ್ವಳನ್ನು ಬಿಟ್ಟು ಸಂತೆ ಮಾರ್ಕೆಟಿನಲ್ಲಿ ನೋಟು ರದ್ದತಿಯ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಮಾತಾಡಿದ್ದಕ್ಕೆ,  ಬಡವರಿಂದ ಬಿರುನುಡಿಗಳನ್ನು ಕೇಳಿದವರು ಇಂದು ಬೀದಿಗಿಳಿದು ಹೋರಾಟ ಮಾಡಿದರೆ, ರಾಜ್ಯವಾಳುವ ಪಕ್ಷ ಅಪಹಾಸ್ಯಕ್ಕೀಡಾಗಲಿದೆ’  ಎಂದು ಕೋಟ ಐವನ್ ಗೆ ಕಿವಿಮಾತು ಹೇಳಿದ್ದಾರೆ.

ನೋಟು ನಿಷೇಧದ ಅಂತಿಮ ದಿನ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಗರ್ಭಿಣಿ ಮಹಿಳೆಯರಿಗೆ ನೀಡಿದ ಆರ್ಥಿಕ ನೆರವು, ರೈತರ ಸಾಲದ ಬಡ್ಡಿಗೆ ನೀಡಿದ ವಿನಾಯಿತಿ, ಮನೆ ನಿರ್ಮಾಣ ಸಾಲಕ್ಕೆ ಬಡ್ಡಿ ಸಬ್ಸಿಡಿ ಇವುಗಳನ್ನೆಲ್ಲಾ ಸ್ವಾಗತಿಸುವ ಬದಲು ಐವನ್ ಡಿಸೋಜರ ಹೊಣೆಗೇಡಿತನ ಮತ್ತು ಅಹಂಕಾರದ ಮಾತುಗಳಿಗೆ ಮುಂದಿನ ಚುನಾವಣೆಯಲ್ಲಿ ಜನಸಾಮಾನ್ಯರು ಉತ್ತರ ಕೊಡಲಿದ್ದಾರೆಂದು ಹೇಳಿದ ಕೋಟ, ನಿಮ್ಮದೇ ಶೈಲಿಯಲ್ಲಿ ಉತ್ತರ ಕೊಡಲೂ ನಮಗೂ ಬರುತ್ತದೆ ಎಂದು ನೀವು ತಿಳಿದುಕೊಳ್ಳಬೇಕೆಂದು ಎಚ್ಚರಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X