ಪೇರೋಡ್ ಉಸ್ತಾದ್ ನೇತೃತ್ವದ ಸಂದೇಶ ಯಾತ್ರೆಗೆ ಚಾಲನೆ

ಉಡುಪಿ, ಜ.2: ಕುಟ್ಯಾಡಿ ಸಿರಾಜುಲ್ ಹುದಾ ಸಂಸ್ಥೆಯ ಬೆಳ್ಳಿಹಬ್ಬದ ಪ್ರಯುಕ್ತ ಕೇರಳ ಎಸ್‌ವೈಎಸ್ ರಾಜ್ಯಾಧ್ಯಕ್ಷ ಶೈಖುನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ನೇತೃತ್ವದಲ್ಲಿ ಕುಂದಾಪುರದಿಂದ ಕೊಡಗುವರೆಗೆ ಹಮ್ಮಿಕೊಳ್ಳಲಾಗಿರುವ ಸಂದೇಶ ಯಾತ್ರೆಗೆ ಸೋಮವಾರ ಕುಂದಾಪುರದ ಸಯ್ಯದ್ ಯುಸೂಫ್ ವಲಿಯುಲ್ಲಾ ದರ್ಗಾ ಶರೀಫ್‌ನಲ್ಲಿ ರಿಝಾರತ್ ನೊಂದಿಗೆ ಚಾಲನೆ ನೀಡಲಾಯಿತು.
ಕಟಪಾಡಿಯಲ್ಲಿ ನಡೆದ ಸಂದೇಶ ಯಾತ್ರೆಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಎಂ.ಎಸ್.ಎಂ.ಅಬ್ದುಲ್ ರಶೀದ್ ಝೈನಿ, ಮನುಷ್ಯರಲ್ಲಿ ಮನುಷ್ಯತ್ವ, ಸಹೋದರತೆ, ಸೌಹಾರ್ದತೆಯನ್ನು ಬಿತ್ತುವ ಶಿಕ್ಷಣ ಸಂಸ್ಥೆಗಳ ಅಗತ್ಯ ಪ್ರಸ್ತುತ ಸಮಾಜಕ್ಕೆ ಇದೆ. ಧಾರ್ಮಿಕತೆ, ಮಾನವೀಯತೆಯನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಉಗ್ರವಾದಕ್ಕೆ ಧರ್ಮದ ಹೆಸರನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಯಾವುದೇ ಧರ್ಮವು ಹಿಂಸೆಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದರು.
ಕಾಪು ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 250 ಕೋಟಿ ರೂ. ಅನುದಾನ ಮಂಜೂರಾಗಿದ್ದು, ನಿಗಮಕ್ಕೆ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ಶೀಘ್ರವೇ ಇತ್ಯರ್ಥಗೊಳಿಸಿ ಫಲಾನುಭವಿಗಳಿಗೆ ಅಗತ್ಯ ನೆರವು ಒದಗಿಸಬೇಕಾಗಿದೆ. ಸಮಾಜದಲ್ಲಿರುವ ಎಲ್ಲ ಧರ್ಮೀಯರು ಸಹೋದರತೆಯಿಂದ ಬದುಕುವ ಮೂಲಕ ಸೌಹಾರ್ದ ಯುತ ವಾತಾವರಣ ನಿರ್ಮಿಸಬೇಕು ಎಂದರು.
ಪೇರೋಡ್ ಉಸ್ತಾದ್ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಮುಳೂರು ಸುನ್ನೀ ಸೆಂಟರ್‌ನ ಮೆನೇಜರ್ ಯು.ಕೆ. ಮುಸ್ತಫಾ ಸಅದಿ ವಹಿಸಿದ್ದರು.
ಅಸ್ಸಯ್ಯಿದ್ ಜಅ್ಫರ್ ತಂಙಳ್ ಕೋಟೇಶ್ವರ, ಅಬು ಸುಫಿಯಾನ್ ಇಬ್ರಾಹಿಂ ಮದನಿ, ಕಾಪು ಅಹ್ಮದ್ ಕಾಸಿಮಿ, ಅಶ್ರಫ್ ಸಅದಿ ಮಲ್ಲೂರು, ಕಟಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ವಿನಯ ಬಲ್ಲಾಳ್, ಸ್ವಾಗತ ಸಮಿತಿಯ ಅಧ್ಯಕ್ಷ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಮಣಿಪುರ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ಮಿಸ್ಬಾಹಿ, ಮುಹಮ್ಮದಾಲಿ ಸಖಾಫಿ, ಹಾಜಿ ಮುಹ್ಯಿಯುದ್ದೀನ್ ಗುಡ್‌ವಿಲ್, ಎಚ್.ಶಅಬಾನ್, ಮೂಪರ್ ಹಮೀದ್, ಅಬೂಬಕ್ಕರ್ ನೇಜಾರ್, ನ್ಯಾಯವಾದಿ ಹಂಝತ್ ಕೋಡಿ, ಹಾಬಿದ್ ಬ್ಯಾರಿ, ಇಸ್ಮಾಯಿಲ್ ಹಾಜಿ, ನಝೀರ್ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.
ಕಟಪಾಡಿ ಮಸೀದಿಯ ಖತೀಬ್ ಬಶೀರ್ ಮದನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಚೊಕ್ಕಾಡಿ ಮಸೀದಿಯ ಖತೀಬ್ ವೌಲಾನ ಅಬ್ದುಲ್ ಹಫೀಝ್ ಕಿರಾತ್ ಪಠಿಸಿದರು.
ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







