ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ: ಅಪಾರ ಹಾನಿ

ಉಳ್ಳಾಲ , ಜ.2 : ತೊಕ್ಕೊಟ್ಟು ಸಮೀಪದ ಮಂಚಿಲದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಂದಕ್ಕೆ ಬೆಂಕಿ ತಗಲಿ ಲಕ್ಷಾಂತರ ನಷ್ಟ ಉಂಟಾಗಿರುವ ಘಟನೆ ಸೋಮವಾರ ತಡರಾತ್ರಿ ವೇಳೆ ನಡೆದಿದೆ.
ಮಂಚಿಲದ ಗೀತಾ ಎಂಬವರ ಪೃಥ್ವಿ ನಿವಾಸದಲ್ಲಿ ಘಟನೆ ಸಂಭವಿಸಿದೆ.
ಮನೆಮಂದಿ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭ ತೆಂಗಿನ ಗರಿ ವಿದ್ಯುತ್ ತಂತಿಗೆ ಬಿದ್ದಿತ್ತು. ಪರಿಣಾಮ ಮನೆಯೊಳಗಡೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಇಲೆಕ್ಟ್ರಾನಿಕ್ ಉಪಕರಣಗಳೆಲ್ಲವೂ ಬೆಂಕಿಗೆ ಆಹುತಿಯಾಗಿದೆ.
ಮನೆಯೊಳಗಡೆ ಬೆಂಕಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಅಯೂಬ್ ಉಳ್ಳಾಲ್ ಮತ್ತು ಮೌರೀಸ್ ಮೊಂತೇರೊ ಎಂಬವರು ಬಾಗಿಲು ಒಡೆದು ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ಘಟನೆಯಿಂದ ರೂ. 1ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
Next Story





