ಬಗ್ದಾದ್: ಆತ್ಮಹತ್ಯಾ ಕಾರ್ ಬಾಂಬ್ ದಾಳಿ; 32 ಸಾವು

ಬಗ್ದಾದ್ (ಇರಾಕ್), ಜ. 2: ಇರಾಕ್ ರಾಜಧಾನಿ ಬಗ್ದಾದ್‌ನ ಜನನಿಬಿಡ ಪ್ರದೇಶವೊಂದರಲ್ಲಿ ಸೋಮವಾರ ನಡೆದ ಆತ್ಮಹತ್ಯಾ ಕಾರ್‌ಬಾಂಬ್ ದಾಳಿಯಲ್ಲಿ ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ ಹಾಗೂ ಡಝನ್‌ಗಟ್ಟಳೆ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಲಿಪಶುಗಳ ಪೈಕಿ ಹೆಚ್ಚಿನವರು ಸದರ್ ನಗರದ ಕೇಂದ್ರ ಭಾಗದಲ್ಲಿ ಕೆಲಸಕ್ಕಾಗಿ ಕಾದು ಕುಳಿತಿದ್ದ ದಿನಮಜೂರಿ ಕಾರ್ಮಿಕರು.
ಇದು ಬಗ್ದಾದ್‌ನಲ್ಲಿ ಮೂರು ದಿನಗಳ ಅಂತರದಲ್ಲಿ ನಡೆದ ಎರಡನೆ ಭೀಕರ ದಾಳಿಯಾಗಿದೆ.
ದಾಳಿಯಲ್ಲಿ ಕನಿಷ್ಠ 61 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮಧ್ಯ ಬಗ್ದಾದ್‌ನ ಜನನಿಬಿಡ ಮಾರುಕಟ್ಟೆ ಪ್ರದೇಶವೊಂದರಲ್ಲಿ ಶನಿವಾರ ನಡೆದ ಅವಳಿ ಸ್ಫೋಟಗಳಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದರು.
ಸ್ಫೋಟದ ಜವಾಬ್ದಾರಿಯನ್ನು ತಕ್ಷಣಕ್ಕೆ ಯಾರೂ ವಹಿಸಿಕೊಂಡಿಲ್ಲ.
Next Story





