ಸಂಸದರಿಂದ ಜಿಲ್ಲೆಗೆ ಬೆಂಕಿ ಹಚ್ಚುವ ಬೆದರಿಕೆ : ಸಿಪಿಎಂ ಖಂಡನೆ
ಮಂಗಳೂರು, ಜ. 2: ಕಾರ್ತಿಕ್ ರಾಜ್ ಕೊಲೆ ಆರೋಪಿಗಳನ್ನು 10 ದಿನಗಳಲಿ ಬಂಧಿಸದಿದ್ದರೆ ದ.ಕ.ಜಿಲ್ಲೆಗೆ ಬೆಂಕಿ ಹಾಕಲು ನಮಗೆ ಸಾಧ್ಯವಿದೆ ಎಂದು ಜಿಲ್ಲೆಯ ಬಿಜೆಪಿ ಸಂಸದ ನಳಿನ್ ಕುಮಾರ್ ಬೆದರಿಕೆ ಹಾಕಿದ್ದಾರೆ. ಇದು ಓರ್ವ ಜವಾಬ್ದಾರಿಯುತ ಜನಪ್ರತಿನಿಧಿ ಬೇಜವಾಬ್ದಾರಿ ಹೇಳಿಕೆಯಾಗಿದೆ ಮತ್ತು ಜಿಲ್ಲೆಯ ಶಾಂತಿ ಸೌಹಾರ್ದದವನ್ನು ಕೆಡಿಸುವ ಪ್ರಯತ್ನದಾಗಿದೆ ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಓರ್ವ ಅಮಾಯಕನ ಕೊಲೆ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಈ ರೀತಿಯಲ್ಲಿ ದುರುಪಯೋಗ ಮಾಡುವುದು ತೀರಾ ಅಸಾಂವಿಧಾನಿಕ ವರ್ತನೆಯಾಗಿದೆ. ಇಂತಹ ಪ್ರಚೋದಕ ಹೇಳಿಕೆಗಳ ಬಗ್ಗೆ ಜನತೆ ಎಚ್ಚರಿಕೆ ವಹಿಸಬೇಕೆಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿಯು ನೀಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
Next Story





