ಮರಿನ್‌ಗೆ ಸತತ ಜಯ, ಸೈನಾಗೆ ಸೋಲು
ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್

ಹೈದರಾಬಾದ್, ಜ.2: ಮೂರನೆ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಸೋಮವಾರ ಶುಭಾರಂಭ ಮಾಡಿದ್ದ ಸ್ಪೆನ್‌ನ ಸೂಪರ್ ಸ್ಟಾರ್ ಕ್ಯಾರೊಲಿನ್ ಮರಿನ್ ತನ್ನ ಎರಡನೆ ಪಂದ್ಯದಲ್ಲಿ ಭಾರತದ ಇನ್ನೋರ್ವ ಸ್ಟಾರ್ ಆಟಗಾರ್ತಿ, ಅವಾದ್ ವಾರಿಯರ್ಸ್ ತಂಡದ ಸೈನಾ ನೆಹ್ವಾಲ್‌ರನ್ನು ಮಣಿಸಿದ್ದಾರೆ.
ಸೋಮವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮರಿನ್ ಅವರು ಸೈನಾರನ್ನು 15-12, 11-5 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಈ ಗೆಲುವಿನ ಮೂಲಕ ಹೈದರಾಬಾದ್ ಹಂಟರ್ಸ್ ತಂಡ 1-1 ರಿಂದ ಸಮಬಲ ಸಾಧಿಸಿತು. ಮರಿನ್ ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡದ ಸಿಂಧುರನ್ನು ಮಣಿಸಿದ್ದರು. ಇದೀಗ ಸತತ 2ನೆ ಜಯ ಸಾಧಿಸಿದರು.
ಸೈನಾ ಅವರು ಮರಿನ್ ವಿರುದ್ಧ 4-3 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ
Next Story





