ಪ್ರಥಮ ದರ್ಜೆ ಸಹಾಯಕ ಎಸಿಬಿ ಬಲೆಗೆ

ಸೊರಬ, ಜ.2: ಪಟ್ಟಣದ ತಾಲೂಕು ಕಚೇರಿಯಲ್ಲಿನ ಹಕ್ಕು ದಾಖಲಾತಿ ಶಾಖೆಯ ಪ್ರಥಮ ದರ್ಜೆ ಸಹಾಯಕ ಬಿ.ಎಸ್. ರಾಜು ಜಮೀನಿನ ಖಾತೆ ಬದಲಾವಣೆಗೆ ಸಂಬಂಧಪಟ್ಟಂತೆ ಎರಡು ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ತಾಲೂಕಿನ ನೆಲ್ಲಿಕೊಪ್ಪಗ್ರಾಮದ ರಾಜಪ್ಪಎಂಬವರು ಮೂಡಿ ದೊಡ್ಡಿಕೊಪ್ಪಸರ್ವೇ ನಂ. 336/1ರ ಜಮೀನಿನ ಖಾತೆ ಬದಲಾವಣೆಗೆ ಕಳೆದ ಎರಡು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆ ವಿಳಂಬವಾದ ಬಗ್ಗೆ ಈ ಹಿಂದೆ ಹಲವು ಬಾರಿ ಸಾಗರ ಉಪವಿಭಾಗಾಧಿಕಾರಿ ಹಾಗೂ ಸೊರಬ ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದರು. ವಿಳಂಬ ಮಾಡದೆ ಅರ್ಜಿದಾರರ ಕೆಲಸ ಮಾಡಿಕೊಡುವಂತೆ ತಹಶೀಲ್ದಾರ್ ಸೂಚಿಸಿದ್ದರೂ ಅಧಿಕಾರಿಗಳ ಮಾತಿಗೆ ಬೆಲೆ ನೀಡದ ಆರೋಪಿ ವಿನಾ ಕಾರಣ ವಿಳಂಬ ಧೋರಣೆ ಅನುಸರಿಸಿದ್ದಲ್ಲದೆ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದನು ಎಂದು ರಾಜಪ್ಪದೂರಿದ್ದಾರೆ.
ಈ ಬಗ್ಗೆ ರಾಜಪ್ಪಎಸಿಬಿಗೆ ದೂರು ಸಲ್ಲಿಸಿದರು. ಅವರ ದೂರಿನಂತೆ ಸೋಮವಾರ ಸಂಜೆ ತಾಲೂಕು ಕಚೇರಿಗೆ ದಾಳಿ ನಡೆಸಿದ ಡಿವೈಎಸ್ಪಿ ಂದ್ರಪ್ಪನೇತೃತ್ವದ ಎಸಿಬಿ ತಂಡ ದಾಳಿ ನಡೆಸಿ ಹಕ್ಕು ದಾಖಲಾತಿ ಶಾಖೆಯ ಪ್ರಥಮ ದರ್ಜೆ ಸಹಾಯಕ ಬಿ.ಎಸ್.ರಾಜು ಅವರನ್ನು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಹಣ ಸಮೇತ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.





