ಹೋರಿಕಾಳಗದಲ್ಲಿ ಇಬ್ಬರು ಸಾವು
ಸೊರಬ, ಜ.2: ಹೋರಿ ಬೆದರಿಸುವ ಕ್ರೀಡೆಯಲ್ಲಿ ಇಬ್ಬರು ಯುವಕರು ಮೃತ ಪಟ್ಟಿರುವ ಘಟನೆ ಸೋಮವಾರ ಸೊರಬ ತಾಲೂಕಿನ ತಲ್ಲೂರು ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಶಕುನವಳ್ಳಿ ಗ್ರಾಮದ ಮನೋಜ್(17) ಹಾಗೂ ಹಾನಗಲ್ ತಾಲೂಕಿನ ಶಿರವಾಡಿ ಗ್ರಾಮದ ಹೇಮಂತ್ (23) ಮೃತ ದುರ್ದೈವಿಗಳು. ಹೋರಿ ಬೆದರಿಸುವ ಕ್ರೀಡೆೆಯನ್ನು ನೋಡುತ್ತಿದ್ದ ವೇಳೆ ಇವರಿಗೆ ಹೋರಿ ತಿವಿದ ಪರಿಣಾಮ ಗಂಭೀರ ಗಾಯಗೊಂಡು ತೀವ್ರ ತರಹದ ರಕ್ತಸ್ರಾವವಾಗುತ್ತಿತ್ತು. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಇಬ್ಬರೂ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ.
ಹೋರಿ ಬೆದರಿಸುವ ಕ್ರೀಡೆಗೆ ಪೊಲೀಸ್ ಇಲಾಖೆ ಯಾವುದೇ ಪರವಾನಿಗೆ ನೀಡಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





