ಕುಂಜತ್ತಬೈಲ್: ನೋಬಲ್ ಪ್ರೌಢ ಶಾಲಾ ವಾರ್ಷಿಕೋತ್ಸವ

ಕುಂಜತ್ತಬೈಲ್, ಜ.3: ಅಜ್ಙಾನವೆಂಬ ಕತ್ತಲೆಯನ್ನು ಜ್ಙಾನವೆಂಬ ಅಂಜನ ಕಡ್ಡಿಯಿಂದ ದೂರೀಕರಿಸಿ ವಿದ್ಯಾರ್ಥಿಯ ಕೀರ್ತಿಯನ್ನು ಎಲ್ಲೆಡೆ ಪಸರಿಸುವಂತೆ ಮಾಡುವ ಗುರುಗಳನ್ನು ವಿದ್ಯಾರ್ಥಿಗಳು ಸದಾ ಗೌರವಿಸಬೇಕು ಎಂದು ಮನಪಾ ಮೇಯರ್ ಬಿ. ಹರಿನಾಥ್ ಹೇಳಿದರು.
ಅವರು ಕುಂಜತ್ತಬೈಲ್‌ನ ನೋಬಲ್ ಪ್ರೌಢ ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ನೀಡುವ ಸಾಕಷ್ಟು ಸಂಖ್ಯೆಯ ಶಿಕ್ಷಣ ಸಂಸ್ಥೆಗಳಿದ್ದು ವಿದ್ಯಾರ್ಥಿಗಳ ಆಯ್ಕೆ ಉತ್ತಮವಾಗಿರಬೇಕು. ನೋಬಲ್ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ ಎಂದರು.
ಮುಖ್ಯ ಅಥಿತಿಯಾಗಿ ಶಾಸಕ ಬಿ.ಎ. ಮೊಯಿದಿನ್ ಬಾವ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಆಧುನಿಕ ಕಾಲದ ಯುವ ಜನತೆಯ ಮನೋಭಾವಗಳಲ್ಲಿ ಹಿರಿಯರು ಬದಲಾವಣೆಗಳನ್ನು ತರಬೇಕಾದ ಅನಿವಾರ್ಯ ಇದೆ ಎಂದರು. ಮನಪಾ ಸದಸ್ಯ ಹಾಗೂ ಶಾಲಾ ಸಂಚಾಲಕ ಮುಹಮ್ಮದ್ ಕೆ., ಶಿಕ್ಷಣ ಇಲಾಖೆಯ ಅಧಿಕಾರಿ ಪುರುಷೋತ್ತಮ್ ಟಿ., ಶಿಕ್ಷಣ ಸಂಯೋಜಕ ಜಿ.ಉಸ್ಮಾನ್, ಶ್ರೀದೇವಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಕೆ.ಇ.ಪ್ರಕಾಶ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಶೆಹನಾರ್, ಕಾರ್ಯದರ್ಶಿ ಮುಹಮ್ಮದ್ ಶರೀಫ್, ಕೋಶಾಧಿಕಾರಿ ಮುಹಮ್ಮದ್ ಶಾರೀಕ್ ಎಂ., ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶಕುಂತಲಾ, ಮಾಜಿ ಅಧ್ಯಕ್ಷ ಆರ್.ಕೆ.ಹಾಜಿ ಉಪಸ್ಥಿತರಿದ್ದರು. ಸುಜಾತ ರಾಕೇಶ್, ಸ್ವಪ್ನಾ, ಶ್ವೇತ ಎಸ್ ಪೈ ಕಾರ್ಯಕ್ರಮ ನಿರೂಪಿಸಿದರು. ಕರಾಟೆ ಪಟು ಆಕಾಶ್ ಶೆಟ್ಟಿ, ಮುಹಮ್ಮದ್ ಶರೀಫ್ ಅವರನ್ನು ಸನ್ಮಾನಿಸಲಾಯಿತು.







