ಉ.ಕೊರಿಯದ ಕ್ಷಿಪಣಿ ಅಮೆರಿಕಕ್ಕೆ ತಲುಪದು: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಜ.3: ಅಮೆರಿಕದವರೆಗೆ ತಲುಪುವ ಆಣ್ವಸ್ತ್ರ ಒಯ್ಯುವ ಕ್ಷಿಪಣಿ ಯನ್ನು ಉತ್ತರ ಕೊರಿಯ ನಿರ್ಮಿಸಲು ಸಾಧ್ಯವಿಲ್ಲ ಎಂದು ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
"ಅಮೆರಿಕಕ್ಕೆ ತಲುಪುವ ಅಣ್ವಸ್ತ್ರ ಒಯ್ಯುವ ಸಾಮರ್ಥ್ಯದ ಕ್ಷಿಪಣಿ ನಿರ್ಮಾಣ ಉತ್ತರಕೊರಿಯ ಆರಂಭಿಸಿದೆ ಆದರೆ ಅದು ಎಂದೂ ನಿಜವಾಗದು’ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಅಣುವಾಹಕ ದೀರ್ಘದೂರ ಬ್ಯಾಲೆಸ್ಟಿಕ್ ಕ್ಷಿಪಣಿ ನಿರ್ಮಾಣ ಕೊನೆಯ ಹಂತದಲ್ಲಿದೆ ಎಂದು ಉತ್ತರ ಕೊರಿಯ ಅಧ್ಯಕ್ಷ ಕಿಂಜೊಂಗ್ ಉನ್ ಘೋಷಿಸಿದ ಬೆನ್ನಿಗೆ ಟ್ರಂಪ್‌ರಿಂದ ಈ ಹೇಳಿಕೆ ಹೊರಬಂದಿದೆ.
ಉತ್ತರಕೊರಿಯವನ್ನು ಒಂದು ಅಣುರಾಷ್ಟ್ರವೆಂದು ಸಮ್ಮತಿಸುವುದಿಲ್ಲ ಎಂದು ಅಮೆರಿಕ ಈ ಹಿಂದೆ ಹೇಳಿತ್ತು. ಆದರೆ ಉತ್ತರಕೊರಿಯ ವಿಚಾರದಲ್ಲಿ ಟ್ರಂಪ್ ತನ್ನ ನೀತಿಯನ್ನು ಬಹಿರಂಗಪಡಿಸಿಲ್ಲ ಎಂದು ವರದಿಯಾಗಿದೆ.
Next Story





