ವಾನಿ ಹತ್ಯೆ ಬಳಿಕ ಭೀತಿವಾದಕ್ಕೆ ‘ಜೈ’ಎಂದಿರುವ 59 ಕಾಶ್ಮೀರಿ ಯುವಕರು

ಸಾಂದರ್ಭಿಕ ಚಿತ್ರ
ಜಮ್ಮು,ಜ.3: ಕಳೆದ ವರ್ಷದ ಜುಲೈ 8ರಂದು ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಹಿಝ್ಬುಲ್ ಮುಜಾಹಿದೀನ್ ಭಯೋತ್ಪಾದಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರ ಕಣಿವೆಯಲ್ಲಿ ಒಟ್ಟು 59 ಯುವಕರು ಭಯೋತ್ಪಾದಕರ ಗುಂಪುಗಳಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.
ದಾರಿ ತಪ್ಪಿರುವ ಯುವಕರು ಮುಖ್ಯವಾಹಿನಿಗೆ ಮರಳುವಂತೆ ಮತ್ತು ಉಗ್ರಗಾಮಿಗಳು ಹಿಂಸೆಯನ್ನು ತೊರೆಯುವಂತೆ ಹಾಗೂ ಅವರು ಭಾರತದ ಅಖಂಡತೆಯನ್ನು ಮತ್ತು ಸಂವಿಧಾನವನ್ನು ಒಪ್ಪಿಕೊಳ್ಳುವಂತೆ ಉತ್ತೇಜಿಸಲು ಪುನರ್ವಸತಿ ನೀತಿಯೊಂದನ್ನು ಸರಕಾರವು ಹೊಂದಿದೆ ಎಂದರು.
ಈ ನೀತಿಯನ್ವಯ ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗುವ ಭಯೋತ್ಪಾದಕರಿಗೆ 1.50 ಲ.ರೂ.ಗಳ ನಿರಖು ಠೇವಣಿ, ಮೂರು ವರ್ಷಗಳವರೆಗೆ ಪ್ರತಿ ತಿಂಗಳು 2,000 ರೂ.ಗಳ ಸ್ಟೈಫಂಡ್ ಸೇರಿದಂತೆ ಹಲವಾರು ಕೊಡುಗೆಗಳನ್ನು ಸರಕಾರವು ನೀಡಲಿದೆ ಎಂದು ಮುಫ್ತಿ ತಿಳಿಸಿದರು. ರಾಜ್ಯದಲ್ಲಿ 2004ರಿಂದ ಈವರೆಗೆ 437 ಭಯೋತ್ಪಾದಕರು ಶರಣಾಗಿದ್ದಾರೆ.





