ಭಟ್ಕಳ : ಅಂಜುಮನ್ ಶಿಕ್ಷಣ ಸಂಸ್ಥೆಯ 5 ವಿದ್ಯಾರ್ಥಿಗಳು ಯುನಿವರ್ಸಿಟಿ ಬ್ಲೂ

ಭಟ್ಕಳ , ಜ.3 : ಇಲ್ಲಿನ ಪ್ರತಿಷ್ಟಿತ ಆಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕ ಕೇಂದ್ರದ 5 ವಿದ್ಯಾರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಫುಟ್ಬಾಲ್ ಹಾಗೂ ವಾಲಿಬಾಲ್ ನಲ್ಲಿ ಯುನಿವರ್ಸಿಟಿ ಬ್ಲೂಆಗಿ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಅಬ್ರಾರ್ ಹಸನ್ ಮೇಗುನ್ ಫುಟ್ಬಾಲ್ ನಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ವಿಶ್ವವಿದ್ಯಾಲಯಕ್ಕೆ ಆಯ್ಕೆಗೊಳ್ಳುತ್ತಿದ್ದು , ಈ ವರ್ಷ ನಸೀಫ್ ಆಹ್ಮದ್ ಸಿದ್ದೀಖಾ ಹಾಗೂ ಇಬ್ರಾಹಿಮ್ ಎಂ.ಜೆ ಯುನಿವರ್ಸಿಟಿ ಬ್ಲೂ ಆಗಿ ನೇಮಕಗೊಂಡಿದ್ದಾರೆ. ವಾಲಿಬಾಲ್ ನಲ್ಲಿ ನವೀದ್ ಖಾನ್ ಹಾಗೂ ಸವ್ವಾಫ್ ಖಾಝಿಯಾ ಯುನಿವರ್ಸಿಟಿ ಬ್ಲೂ ಆಗಿ ನೇಮಕವಾಗಿದ್ದು ಇವರು ಕೇರಳ, ಕಲಬುರ್ಗಿ, ಧಾರವಾಡ ಮತ್ತಿತರೆಡೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.
ಕಾಲೇಜು ಪ್ರಾಂಶುಪಾಲ ಎಂ.ಕೆ. ಶೇಖ್, ಮುಹಮ್ಮದ್ ಮೊಹಸಿನ್, ದೈಹಿಕ ಶಿಕ್ಷಣ ನಿರ್ದೇಶಕ ಕಲೀಮುಲ್ಲಾ ಹಾಗೂ ಮೋಹನ್ ಮೇಸ್ತಾ ಸೇರದಂತೆ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.





