ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪುತ್ತೂರಿನ ಭವಿಷ್‌ಗೆ ದ್ವಿತೀಯ ಸ್ಥಾನ

ಪುತ್ತೂರು, ಜ.3: ಶ್ರೀಲಂಕಾದ ವಾರಿಯಂ ಪೋಲಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪುತ್ತೂರು ಸಮೀಪದ ಕೊಡಿಪಾಡಿಯ ಭವಿಷ್ ದ್ವಿತೀಯ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಇಂಡಿಯಾ ಯೂತ್ ಯೋಗ ಫೆಡರೇಶನ್ ವತಿಯಿಂದ ಚೆನ್ನೈನಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು.
ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 8ನೆ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಭವಿಷ್, ಪುತ್ತೂರಿನ ಬಾಲಕೃಷ್ಣ ಮತ್ತು ವೀಣಾ ದಂಪತಿಯ ಪುತ್ರ.
ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯೋಗ ಶಿಕ್ಷಕ ಬಿ. ಜಯರಾಮ್ ಅವರ ಗರಡಿಯಲ್ಲಿ ಪಳಗಿ ಈ ಸಾಧನೆ ಗೈದಿದ್ದಾರೆ.
ಭವಿಷ್‌ನ ಸಾಧನೆಗೆ ಅಜ್ಜ ಶೀನ, ತಂದೆ ಬಾಲಕೃಷ್ಣ, ತಾಯಿ ವೀಣಾ, ಸಹೋದರಿ ಭವಿತಾ, ಯೋಗ ಮಾರ್ಗದರ್ಶಕ ಬಿ. ಜಯರಾಮ್ ಹಾಗೂ ಶಾಲೆಯ ಸಿಬ್ಬಂದಿ ಶುಭ ಹಾರೈಸಿದ್ದಾರೆ.
Next Story





