ಬಂಟ್ವಾಳ : ಪ್ರೀತಿಸಿದ ಯುವತಿಯನ್ನು ಇರಿದು ಕೊಂದು ತಾನೂ ಆತ್ಮಹತ್ಯೆಗೈದ ಯುವಕ

ಬಂಟ್ವಾಳ, ಜ.3 : ತಾಲೂಕಿನ ಕೊಯ್ಲ ದ ಪಾಂಡವಗುಡ್ಡೆ ಎಂಬಲ್ಲಿ ಯುವಕನೋರ್ವ ಪ್ರೀತಿಸಿದ ಯುವತಿಯನ್ನು ಚೂರಿಯಿಂದ ಇರಿದು ಕೊಲೆಗೈದು ತಾನೂ ಆತ್ಮಹತ್ಯೆಗೈದ ಘಟನೆ ನಡೆದಿದೆ.
ಕೊಲೆಗೀಡಾದ ಯುವತಿಯನ್ನು ಬಂಟ್ವಾಳದ ಪುದನಗುಡ್ಡೆಯ ನಿವಾಸಿ ದಿವ್ಯ (23) ಎಂದು ಗುರುತಿಸಲಾಗಿದೆ.
ಯುವತಿಯನ್ನು ಕೊಲೆಗೈದು ಆತ್ಮಹತ್ಯೆಗೈದ ಯುವಕನನ್ನು ಕೊಯ್ಲದ ಕುಡಮಾಣಿ ನಿವಾಸಿ ಮೋಹನ ಪೂಜಾರಿ ಯವರ ಮಗ ಸುಜಿತ್ (28) ಎಂದು ಗುರುತಿಸಲಾಗಿದೆ.
ಈ ಇಬ್ಬರೂ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯು ಇತ್ತೀಚೆಗೆ ಪ್ರೀತಿಯನ್ನು ನಿರಾಕರಿಸಿ ಹುಡುಗನಿಂದ ದೂರವಾಗಿದ್ದಳು ಎಂದು ಹೇಳಲಾಗುತ್ತಿದೆ.
ಇದರಿಂದ ಕ್ರೋಧಗೊಂಡ ಯುವಕ ಯುವತಿಯನ್ನು ಪಾಂಡವಗುಡ್ಡೆಗೆ ಕರೆದುಕೊಂಡು ಹೋಗಿ , ಚೂರಿಯಿಂದ ಇರಿದು ಕೊಲೆಗೈದಿದ್ದಾನೆ. ಬಳಿಕ ಪಕ್ಕದಲ್ಲಿರುವ ಗೇರು ಮರಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ , ಪಿಎಸ್ಐ ಎ.ಕೆ.ರಕ್ಷಿತ್ ಗೌಡ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಥಾಧಿಕಾರಿ ಭೇಟಿ ನೀಡಲು ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ.







