ಕುಶಾಲನಗರ: ಯುವಕ ಆತ್ಮಹತ್ಯೆ
ಕುಶಾಲನಗರ, ಜ.3: ಸ್ಥಳೀಯ ಹೆಬ್ಬಾಲೆ ಗ್ರಾಮ ನಿವಾಸಿಯಾದ ಚಂಗಪ್ಪ ಅಲಿಯಾಸ್ ಸಂಜು(23) ಎಂಬ ಯುವಕ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಮೂಲತಃ ಹೆಬ್ಬಾಲೆಯಲ್ಲಿ ವಾಸವಾಗಿದ್ದ ಮೇದಪ್ಪ ಮತ್ತು ಪ್ರೇಮಾ ಅವರ ಮಗನೆಂದು ತಿಳಿದುಬಂದಿದೆ.
ತನ್ನ ಮನೆಯ ಕೊಠಡಿಯಲ್ಲಿ ಮಂಗಳವಾರ ಬೆಳಗ್ಗೆ ನೇಣಿಗೆ ಶರಣಾಗಿರುವುದಾಗಿ ಕಂಡುಬಂದ ಕೂಡಲೇ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಠಾಣಾಧಿಕಾರಿ ಜೆ.ಇ. ಮಹೇಶ್ ಮತ್ತು ಪೊಲೀಸ್ ಸಿಬ್ಬಂದಿ ಮೃತದೇಹವನ್ನು ಪರಿಶೀಲಿಸಿದರು. ನಂತರ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಯಿತು ಎಂದು ತಿಳಿದುಬಂದಿದೆ.
Next Story





