ಬಾಲಾಜಿ ಕೆಕೆಆರ್ ಬೌಲಿಂಗ್ ಕೋಚ್

ಮುಂಬೈ, ಜ.3: ಮುಂಬರುವ 2017ರ ಐಪಿಎಲ್ ಟೂರ್ನಿಗೆ ತಂಡದ ಬೌಲಿಂಗ್ ಕೋಚ್ ಆಗಿ ಭಾರತದ ಮಾಜಿ ವೇಗದ ಬೌಲರ್ ಎಲ್.ಬಾಲಾಜಿ ಅವರನ್ನು ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ಮಂಗಳವಾರ ನೇಮಕ ಮಾಡಿದೆ.
ಬಾಲಾಜಿ 2016ರ ಸೆಪ್ಟಂಬರ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ತಮಿಳುನಾಡು ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
2011ರಿಂದ 2013ರ ಐಪಿಎಲ್ ಆವೃತ್ತಿಯಲ್ಲಿ ಬಾಲಾಜಿ ಕೆಕೆಆರ್‌ನ ಪ್ರಮುಖ ಬೌಲರ್ ಆಗಿದ್ದರು. 2012ರಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
‘‘ಬಾಲಾಜಿ ಅವರನ್ನು ಕೆಕೆಆರ್ ಬಳಗಕ್ಕೆ ಮತ್ತೊಮ್ಮೆ ಸ್ವಾಗತಿಸಲು ಸಂತೋಷವಾಗುತ್ತಿದೆ. 2011-13ರ ತನಕ ಅವರು ನಮ್ಮ ತಂಡದ ಅವಿಭಾಜ್ಯ ಅಂಗವಾಗಿದ್ದರು. 2012ರಲ್ಲಿ ಕೆಕೆಆರ್ ಪ್ರಶಸ್ತಿ ಜಯಿಸಲು ನರೆವಾಗಿದ್ದರು ಎಂದು ಕೆಕೆಆರ್ ಸಿಇಒ ಹೇಳಿದ್ದಾರೆ.
Next Story





