ಜಾತ್ಯತೀತ ಜನತಾದಳದಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ಸಾಧ್ಯ : ಎಸ್.ಎಮ್.ಆಗಾ

ಮುಂಡಗೋಡ, ಜ.3 : ಜೆಡಿಎಸ್ ಬಲಪಡಿಸಿ ಅಧಿಕಾರಕ್ಕೆ ತಂದರೆ ಅಲ್ಪಸಂಖ್ಯಾತರು ಅಭಿವೃದ್ದಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್ ಸರಕಾರದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕೇವಲ ಓಟಿಗಾಗಿ ಬಳಸಿಕೊಳ್ಳುತ್ತಿದೆ ಬಿಜೆಪಿ ಯದು ಅಲ್ಪಸಂಖ್ಯಾತರನ್ನು ಉದ್ದಾರ ಮಾಡುವುದು ದೂರದ ಮಾತು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಮ್ ಆಗಾ ಹೇಳಿದರು.
ಅವರು ಮಂಗಳವಾರ ಪರಿವೀಕ್ಷಣಾ ಮಂದಿರದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು
ಬಾಂಬೆ ಕರ್ನಾಟಕದ ಏಳು ಜಿಲ್ಲೆಗಳಿಂದ ಪ್ರತಿಜಿಲ್ಲೆಯಲ್ಲಿ ಕೋರ್ ಕಮೀಟಿ ನೇಮಿಸಿ ಪ್ರತಿಯೊಂದು ಜಿಲ್ಲೆಯಿಂದ ಐದು ಜನರ ಕೋರ ಕಮೀಟಿ ರಚನೆ ಮಾಡಲಾಗುತ್ತಿದೆ. ಪ್ರತಿಯೊಂದು ಬೂತ್ ನಿಂದ ಕನಿಷ್ಠ 10 ಅಲ್ಪಸಂಖ್ಯಾತ ಕಾರ್ಯಕರ್ತರನ್ನು ಆಯ್ಕೆಮಾಡಿ ಬರುವ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಓಟುಗಳನ್ನು ಪಕ್ಷಕ್ಕೆ ಬೀಳುವ ಹಾಗೆ ಕಾರ್ಯತಂತ್ರ ರೂಪಿಸಲಾಗುವುದು. ಸುಮಾರು 1-1/12 ಲಕ್ಷ ಅಲ್ಪಸಂಖ್ಯಾತರ ಸೇರುವ ಬೃಹತ್ ಸಮಾವೇಶವನ್ನು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡು ರಾಜ್ಯಾಧ್ಯಕ್ಷರಿಗೆ ಎದುರಿಗೆ ಅಲ್ಪಸಂಖ್ಯಾತರ ಬೇಡಿಕೆಗಳನ್ನು ಇಡಲಾಗುವುದು. ಜೆಡಿಎಸ್ ಗೆಲ್ಲಸಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದೇ ಜೆಡಿಎಸ್ ಅಲ್ಪಸಂಖ್ಯಾತರ ಉದ್ದೇಶ ಎಂದರು.
ಉತ್ತರಕನ್ನಡ ಜಿಲ್ಲೆಯಿಂದ ಕೋರ್ ಕಮೀಟಿಗೆ ಭಟ್ಕಳದ ಇನಾಯಿತುಲ್ಲಾ ಶಾಂಬುದ್ರಿ, ಮುಂಡಗೋಡಿನ ಮುನಾಫ್ ಮಿರ್ಜಾನಕರ್ ಹಳಿಯಾಳದ ಖೈತಾನ ಬರಬೋಸ್, ಶಿರಸಿಯ ಮುತಾಲೀಫ್ ತೌನ್ಸೆ, ಕುಮಟಾದ ಇರ್ಷಾದ ಶೇಖ ಹಾಗೂ ಹೊನ್ನಾವರದ ಪಿಟರ್ ರನ್ನು ಆಯ್ಕೆಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಇಸ್ಮಾಯಿಲ್ ಕಾಲೆಬುಡ್ಡೆ ಮೈಸೂರ ಪ್ರಾಂತಕ್ಕಿಂತ ಬಾಂಬೆ ಕರ್ನಾಟಕ ಪ್ರಾಂತ್‌ದಲ್ಲಿ ಜೆಡಿಎಸ್ ಗೆ ಅಲ್ಪಸಂಖ್ಯಾತರ ಉತ್ತಮ ಬೆಂಬಲವಿದೆ. ಆದ್ದರಿಂದ ಪಕ್ಷವು ಇಲ್ಲಿ ಅತಿ ಮುತುವರ್ಜಿವಹಿಸಿ ಅಲ್ಪಸಂಖ್ಯಾತರನ್ನು ತಮ್ಮ ಪಕ್ಷಕ್ಕೆ ಮತವನ್ನಾಗಿ ಪರಿವರ್ತಿಕೊಳ್ಳುವ ಪ್ರಯತ್ನ ಸಾಗಿದೆ ಎಂದರು.
ಉತ್ತರಕನ್ನಡ ಜಿಲ್ಲೆಯ ಜೆಡಿಎಸ್ ಪ್ರಭಾವಿ ರಾಜಕಾರಣಿ ಇನಾಯಿತುಲ್ಲಾ ಶಾಂಬುದ್ರಿ ಮಾತನಾಡಿ, ಉತ್ತರಕನ್ನಡ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಉತ್ತಮ ಬೆಂಬಲವಿದೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಕೆಲವೇ ಕೆಲವು ಮತಗಳ ಅಂತರದಿಂದ ಸೋಲುಂಡಿವೆ. ಈಗ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ ಬರುವ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮುಜಾಹಿದ್ ಕಾಂಟ್ರಾಕ್ಟರ, ಹುಬ್ಬಳ್ಳಿ-ಧಾರವಾಡ ಮಹಾನಗರ ಸಭೆಯ ಕಾರ್ಪೋರೇಟರ ಅಲ್ತಾಫ್ ಕಿತ್ತೂರ, ಬೆಳಗಾಂವಿಯ ಫೈಜುಲ್ಲಾ ಮಹಡಿವಾಲೆ, ಮುಂಡಗೋಡಿನ ಜೆಡಿಎಸ್ ಧುರಿಣರಾದ ಮುನಾಫ ಮಿರ್ಜಾನಕರ, ತುಕಾರಾಮ ಗುಡ್ಕರ, ಬಾಬಜಾನ್ ಗೋನ್ನುರ ಸೇರಿದಂತೆ ಕಾರವಾರ ತಾಲೂಕಿನ ಧುರಿಣರು ಹೊರತು ಪಡಿಸಿ ಜಿಲ್ಲೆಯ ಎಲ್ಲಾ ತಾಲೂಕಿನ ಅಲ್ಪಸಂಖ್ಯಾತ ಧುರೀಣರು ಹಾಜರಿದ್ದರು.







