ಕರೀನಾರ ಐಟಿ ಇ-ಫೈಲಿಂಗ್ ಹ್ಯಾಕಿಂಗ್ ಆರೋಪಿ ಸೆರೆ
ಮುಂಬೈ,ಜ.3: ಬಾಲಿವುಡ್ ನಟಿ ಕರೀನಾ ಕಪೂರ್ ಅವರ ಆದಾಯ ತೆರಿಗೆ ಇ-ಫೈಲಿಂಗ್ ಖಾತೆಯನ್ನು ಹ್ಯಾಕ್ ಮಾಡಿದ್ದ ಆರೋಪದಲ್ಲಿ ಕೇಂದ್ರೀಯ ಅರೆ ಮಿಲಿಟರಿ ಪಡೆಯ ಉದ್ಯೋಗಿಯನ್ನು ಸೈಬರ್ ಪೊಲೀಸರು ಇಲ್ಲಿ ಬಂಧಿಸಿದ್ದಾರೆ. ಆರೋಪಿಯು ಕರೀನಾರ ದೂರವಾಣಿ ಸಂಖ್ಯೆಯನ್ನು ಪಡೆಯಲು ಬಯಸಿದ್ದ, ಹೀಗಾಗಿ ಅವರ ಐಟಿ ಖಾತೆಯನ್ನು ಹ್ಯಾಕ್ ಮಾಡಿದ್ದ ಎಂದು ಪೊಲೀಸರು ತಿಳಿಸಿದರು.
ಕರೀನಾರ ಐಟಿ ಖಾತೆಗೆ ಕನ್ನ ಹಾಕಿದ್ದ ಬಗ್ಗೆ ಅವರ ಲೆಕ್ಕ ಪರಿಶೋಧಕರು ಕಳೆದ ವರ್ಷ ದೂರು ದಾಖಲಿಸಿದ್ದರು.
ಆರೋಪಿಯು ಅರೆಕಾಲಿಕ ಉದ್ಯೋಗವಾಗಿ ಜನರ ಐಟಿ ರಿಟರ್ನ್‌ಗಳನ್ನು ಸಲ್ಲಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿರುವ ಪೊಲೀಸರು, ಆತನ ಹೆಸರನ್ನು ಬಹಿರಂಗ ಗೊಳಿಸಿಲ್ಲ.
Next Story





