ಚಿಟ್‌ಫಂಡ್ ಹಗರಣ: ಸಿಬಿಐನಿಂದ ಟಿಎಂಸಿ ಸಂಸದ ಬಂದೋಪಾಧ್ಯಾಯ ಬಂಧನ
ಕೋಲ್ಕತಾ, ಜ.3: ರೋಸ್ ವ್ಯಾಲಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿ ಲೋಕಸಭಾ ಸಂಸದ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡ ಸುದೀಪ್ ಬಂದ್ಯೋಪಾಧ್ಯಾಯ ಅವರನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ
ರೋಸ್‌ವ್ಯಾಲಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಕೋಲ್ಕತಾದ ಸಿಜಿಒ ಸಂಕೀರ್ಣದಲ್ಲಿ ಬಂದೋಪಾಧ್ಯಾಯ ರನ್ನು ಮೂರು ತಾಸುಗಳಿಗೂ ಹೆಚ್ಚು ಸಮಯ ಪ್ರಶ್ನಿಸಿದ ಬಳಿಕ ಅವರನ್ನು ಬಂಧಿಸಿದರು.
ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮ ದವರೊಂದಿಗೆ ಮಾತಾಡಿದ ಬಂದೋಪಾಧ್ಯಾಯ ‘‘ಎನ್‌ಡಿಎ ನೇತೃತ್ವದ ಕೇಂದ್ರ ಸರಕಾರ ತನ್ನ ಮತ್ತು ಪಕ್ಷದ ವಿರುದ್ಧ ರಾಜಕೀಯ ಹಗೆತನ ಸಾಧಿಸುತ್ತಿದೆ ಎಂದು ಆರೋಪಿಸಿದ ಬಂದ್ಯೋಪಾಧ್ಯಾಯ, ತನ್ನ ವಿರುದ್ಧ ಯಾವ ಪ್ರಕರಣ ದಾಖಲಾಗಿದೆ ಎಂದು ತಿಳಿದುಕೊಳ್ಳಲು ಸಿಬಿಐ ತನಿಖೆಗೆ ಹಾಜರಾಗುತ್ತಿದ್ದೇನೆ ಎಂದು ತಿಳಿಸಿದ್ದೆ. ಆ ಪ್ರಕಾರ ಬಂದಿದ್ದೇನೆ’’ ಎಂದು ತಿಳಿಸಿದರು. ಇದೇ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಟಿಎಂಸಿ ಪಕ್ಷದ ಮತ್ತೋರ್ವ ಸಂಸದ ತಪಸ್ ಪಾಲ್ ಅವರನ್ನು ಸಿಬಿಐ ಈಗಾಗಲೇ ಬಂಧಿಸಿದೆ. ಈ ಪ್ರಕರಣದಲ್ಲಿ ಶಾರದಾ ಚಿಟ್‌ಫಂಡ್ ಹಗರಣಕ್ಕಿಂತಲೂ ಹೆಚ್ಚಿನ ಮೊತ್ತದ ಹಣ ವಂಚನೆಯಾಗಿದ್ದು, ಪ್ರಕರಣದ ಕುರಿತು ಇ.ಡಿ.(ಜಾರಿ ನಿರ್ದೇಶನಾಲಯ) ಕೂಡಾ ತನಿಖೆ ನಡೆಸುತ್ತಿದೆ. ಕಳೆದ ವರ್ಷದ ಮಾರ್ಚ್ 23ರಿಂದ ಬಂಧನದಲ್ಲಿರುವ ರೋಸ್‌ವ್ಯಾಲಿ ಚಿಟ್‌ಫಂಡ್ ಸಂಸ್ಥೆಯ ಮಾಲಕ ಗೌತಮ್ ಕುಂಡು ಜೊತೆ ಬಂದೋಪಾಧ್ಯಾಯ ಅವರಿಗಿರುವ ನಿಕಟ ಸಂಪರ್ಕದ ಬಗ್ಗೆ ಅವರನ್ನು ಪ್ರಶ್ನಿಸಲಾಯಿತೆಂದು ಸಿಬಿಐ ಮೂಲಗಳು ತಿಳಿಸಿವೆ.
ಬಂದೋಪಾಧ್ಯಾಯ ಅವರು ವಿದೇಶ ಪ್ರವಾಸ, ವಾಹನ ಹಾಗೂ ತನ್ನ ಸಂಬಂಧಿಗಳಿಗೆ ಉದ್ಯೋಗ ನೀಡಿಕೆ ಸೇರಿದಂತೆ ರೋಸ್‌ವ್ಯಾಲಿ ಸಂಸ್ಥೆಯಿಂದ ಹಲವಾರು ಪ್ರಯೋಜನಗಳನ್ನು ಪಡೆದು ಕೊಂಡಿದ್ದರೆಂದು ಸಿಬಿಐ ಅಧಿಕಾರಿಗಳು ಆರೋಪಿಸಿದ್ದಾರೆ.
ಪಶ್ಚಿಮಬಂಗಾಳ ಮೂಲದ ರೋಸ್‌ವ್ಯಾಲಿ ಚಿಟ್‌ಫಂಡ್ ಸಂಸ್ಥೆಯು ಕನಿಷ್ಠ 10 ರಾಜ್ಯಗಳ ಲಕ್ಷಾಂತರ ಮಂದಿ ಹೂಡಿಕೆದಾರರಿಗೆ ಭಾರೀ ಮೊತ್ತದ ಆದಾಯವನ್ನು ನೀಡುವ ಆಮಿಷವನ್ನೊಡ್ಡಿ 15 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ವಂಚಿಸಿತ್ತು. ಈ ಚಿಟ್‌ಫಂಡ್ ಸಂಸ್ಥೆಯಿಂದ ಮೋಸಹೋದವರಲ್ಲಿ ಹೆಚ್ಚಿನವರು ಕಡಿಮೆ ಆದಾಯ ಗುಂಪಿಗೆ ಸೇರಿದವರಾಗಿದ್ದಾರೆ.
ತಳೆದಿದ್ದಾರೆ. ಈ ಮಧ್ಯೆ, ಆಯೋಗ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸುಮಾರು 4 ತಿಂಗಳಾವಧಿ ಬೇಕಾಗಬಹುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.





