ಫೆ.6ರಿಂದ ಎಣ್ಮೂರು ಮಖಾಂ ಉರೂಸ್

ಸುಳ್ಯ, ಜ.3: ಸುಳ್ಯ ತಾಲೂಕಿನ ಎಣ್ಮೂರು ದರ್ಗಾಶರೀಫ್‌ನಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಫೆ.6ರಿಂದ ಫೆ.11ರವರೆಗೆ ನಡೆಯಲಿದೆ.
ಸಮಾರಂಭದಲ್ಲಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಅಸೈಯದ್ ಝೈನುಲ್ ಆಬಿದೀನ್ ತಂಙಲ್ ಎಣ್ಮೂರು-ಮುಚ್ಚಿಲ, ಅಸೈಯದ್ ಅಹ್ಮದ್ ಪೂಕೋಯ ತಂಙಲ್ ಪುತ್ತೂರು, ಹಾಫಿಲ್ ಸೂಫಿಯಾನ್ ಸಖಾಫಿ ಕಾವಳಕಟ್ಟೆ, ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲರ , ಜಬ್ಬಾರ್ ಸಖಾಫಿ ಪಾತೂರ್, ಇ.ಪಿ.ಅಬೂಬಕರ್ ಖಾಸಿಮಿ, ಶಾಕಿರ್ ಬಾಖವಿ ಮಂಬಾಡ್, ಸಿದ್ದೀಕ್ ಜಲಾಲಿ ಕೂರ್ನಡ್ಕ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





