ಚೀನಾದಿಂದ ಲಂಡನ್ ಗೆ ರೈಲು ಮಾರ್ಗ

ಬೀಜಿಂಗ್, ಜ.4: ಚೀನಾದ ಯಿವುನಿಂದ ಲಂಡನ್ ಗೆ ಹೊಸ ರೈಲು ಮಾರ್ಗ ಆರಂಭವಾಗುತ್ತಿದೆ. ಝೆಜಿಯಾಂಗ್ ಪ್ರಾಂತದ ಸಗಟು ಮಾರಾಟ ಮಾರುಕಟ್ಟೆಗೆ ಯಿವು ಬಹಳ ಪ್ರಸಿದ್ಧಿ.
ಈ ರೈಲು 18 ದಿನಗಳ ಕಾಲ 7500 ಮೈಲಿ (12,000 ಕಿಮೀ) ಪ್ರಯಾಣಿಸಿ ಬ್ರಿಟನ್ ತಲುಪಲಿದೆ. ಈ ದಾರಿಯಲ್ಲಿ ಅದು ಕಜಕಿಸ್ತಾನ್, ರಷ್ಯಾ, ಬೆಲಾರಸ್, ಪೋಲಂಡ್, ಜರ್ಮನಿ, ಬೆಲ್ಜಿಯಂ ಮತ್ತು ಫ್ರಾನ್ಸ್ ಗಳನ್ನು ಹಾದು ಲಂಡನ್ ಗೆ ಹೋಗಲಿದೆ.
ಮಾಜಿ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರು ಲಂಡನ್ ಅನ್ನು ವಿದೇಶಿ ಹೂಡಿಕೆಯ ಕೇಂದ್ರವಾಗಿ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಮುಂದಿಟ್ಟಿದ್ದರು. ಚೀನಾ ಮತ್ತು ಪಶ್ಚಿಮ ದೇಶಗಳೆರಡರ ಹೂಡಿಕೆಗೂ ಲಂಡನ್ ಅನ್ನು ತೆರೆದಿಡುವುದು ಅವರ ಉದ್ದೇಶವಾಗಿತ್ತು.
ಪ್ರಧಾನಿ ಥೆರೆಸಾ ಮೇ ಅವರು ಚೀನಾ ಜೊತೆಗೆ ಸಂಬಂಧ ಸುವರ್ಣ ಸಮಾನ ಎಂದು ಹೇಳಿದ್ದಾರೆ. ಐರೋಪ್ಯ ಒಕ್ಕೂಟವನ್ನು ತೊರೆಯುತ್ತಿರುವ ಸಂದರ್ಭದಲ್ಲಿ ಈಗ ಬ್ರಿಟನ್ ಚೀನಾದಿಂದ ಬಿಲಿಯನ್ ಡಾಲರ್ ಗಳ ಹೂಡಿಕೆಯನ್ನು ಎದಿರು ನೋಡುತ್ತಿದೆ.
Next Story





