ಭಾರತ-ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ಭೂಕಂಪನದ ಅನುಭವ

ಹೊಸದಿಲ್ಲಿ, ಜ.4: ಭಾರತ-ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಭೂಕಂಪನ ಅನುಭವವಾಗಿದೆ ಎಂದು ವರದಿಯಾಗಿದೆ.
ಭಾರತ-ಮೈನ್ಮಾರ್ ಗಡಿ ಭಾಗದಲ್ಲಿ 5.4 ರಿಕ್ಟರ್ ಪ್ರಮಾಣದ ಭೂಕಂಪವಾಗಿದೆ ಎಂದು ರಾಷ್ಟ್ರೀಯ ಭೂಕಂಪ ತಜ್ಞರ ಕೇಂದ್ರ ತಿಳಿಸಿದೆ.
ಅರುಣಾಚಲ ಪ್ರದೇಶದ ಕುರುಂಗ್ ಕುಮೆ ಜಿಲ್ಲೆಯಲ್ಲಿ ರಾತ್ರಿ 1:02ರ ಸುಮಾರಿಗೆ 4.3 ರಿಕ್ಟರ್ ಪ್ರಮಾಣದ ಲಘು ಭೂಕಂಪನವಾಗಿದೆ.
ಮಂಗಳವಾರ ಅಸ್ಸಾಂ ಹಾಗೂ ಭಾರತದ ಈಶಾನ್ಯ ಭಾಗದಲ್ಲಿ ಭೂಮಿ ನಡುಗಿದ ಅನುಭವವಾಗಿದ್ದರೆ, ಭಾರತ-ಬಾಂಗ್ಲಾದೇಶ ಗಡಿಯ ಸಮೀಪ, ತ್ರಿಪುರಾದಲ್ಲಿ 5.7 ರಿಕ್ಟರ್ ಪ್ರಮಾಣದ ಭೂಕಂಪನವಾಗಿತ್ತು.
ಏಳು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಮಿರೆರಾಂ, ತ್ರಿಪುರಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಹಾಗೂ ಮಣಿಪುರ ವಿಶ್ವದ 6ನೆ ಅತ್ಯಂತ ಹೆಚ್ಚು ಭೂಕಂಪಪೀಡಿತ ಪ್ರದೇಶ ಎಂದು ಭೂಕಂಪ ಶಾಸ್ತ್ರಜ್ಞರು ಪರಿಗಣಿಸಿದ್ದಾರೆ.
ಈ ಪ್ರದೇಶದಲ್ಲಿ 1897ರಲ್ಲಿ 8.7 ರಿಕ್ಟರ್ ಪ್ರಮಾಣದ ಭೂಕಂಪವಾಗಿತ್ತು. ಭೂಕಂಪಕ್ಕೆ 1,600ಕ್ಕೂ ಅಧಿಕ ಜನರು ಜೀವ ಕಳೆದುಕೊಂಡಿದ್ದರು.
Next Story





