ದಮಾಮ್ ಫ್ಲ್ಯಾಟ್‌ನಲ್ಲಿ ಚಾಕು ತೋರಿಸಿ ದರೋಡೆ

ದಮಾಮ್ ,ಜ.4: ದಮ್ಮಾಂ ಫ್ಯಾಮಿಲಿ ಪ್ಲಾಟ್ ಒಂದರಲ್ಲಿ ದರೋಡೆ ನಡೆದಿದ್ದು, ಹತ್ತು ಪವನ್ ಚಿನ್ನ ನಾಣ್ಯ, ಮೂರು ಮೊಬೈಲ್ ಫೋನ್‌ಗಳನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ. ದಮ್ಮಾಂ ಅದಾಮ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಮೂರುಗಂಟೆ ವೇಳೆ ಮುಖವಾಡ ಧಾರಿ ನಾಲ್ವರ ತಂಡ ಚಾಕು ತೋರಿಸಿ ತಮಿಳ್ನಾಡಿನ ಜಾವೇದ್ ಹಾಗೂ ಅವರ ಪತ್ನಿಯನ್ನು ದರೋಡೆಗೈದಿದೆ ಎಂದು ತಿಳಿದು ಬಂದಿದೆ.
ಪ್ಲಾಟ್‌ನ ಮುಖ್ಯ ದ್ವಾರದ ಕಬ್ಬಿಣದ ಗೇಟು ಹಾಗೂ ಪ್ಲಾಟ್ ಬೀಗ ಮುರಿದು ದರೋಡೆ ಕೋರರು ಒಳನುಗ್ಗಿದ್ದರು. ಸಮೀಪದ ಸಿಸಿಟಿವಿ ದೃಶ್ಯಗಳಿಂದ ಕಳ್ಳರ ಸುಳಿವು ಸಿಕ್ಕಿದೆ ಎಂದು ಪೊಲೀಸಧಿಕಾರಿಗಳು ತಿಳಿಸಿದ್ದಾರೆ. ದರೋಡೆಕೋರರು ಕೆಂಪುಕಾರಲ್ಲಿ ಬಂದಿದ್ದರು.
ಎಲ್ಲರೂ ಯುವಕರಾಗಿದ್ದರು.
ಸಿಸಿಟಿವಿದೃಶ್ಯಗಳನ್ನು ಬಳಸಿ ಕಳ್ಳರ ಪತ್ತೆಗೆ ಪೊಲೀಸ್ ಅಧಿಕಾರಿಗಳು ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ದರೋಡೆ ತಂಡದ ಕಾರಿನ ನಂಬರ್ ದಾಖಲಾಗಿದ್ದು ದರೋಡೆಕಾರರನ್ನು ಶೀಘ್ರದಲ್ಲಿ ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ವಾರ ಹಿಂದೆ ಸಮೀಪದ ಸೋಫಾ ಅಂಗಡಿಯಲ್ಲಿ ದರೋಡೆ ನಡೆದಿತ್ತು. ಅಂದು ದರೋಡೆಕೋರರು ಸಿಸಿಟಿವಿ ಇತ್ಯಾದಿ ಸಾಮಗ್ರಿಗಳನ್ನು ನಾಶಪಡಿಸಿದ ಬಳಿಕ ಅಂಗಡಿಯೊಳಗೆ ನುಗ್ಗಿ ದೋಚಿದ್ದರು ಎಂದು ವರದಿ ತಿಳಿಸಿದೆ.







