ಸಲಹೆ ಕೊಟ್ಟ ಸ್ಪಿನ್ ದಂತಕತೆಗೇ ಗೂಗ್ಲಿ ಎಸೆದರೆ ಅಶ್ವಿನ್ ?

ಮುಂಬೈ, ಜ.4: ಭಾರತೀಯ ತಂಡದ ಖ್ಯಾತ ಬೌಲರ್ ರವಿಚಂದ್ರನ್ ಅಶ್ವಿನ್ ಅವರ ಪಾಲಿಗೆ ಕಳೆದ ವರ್ಷ ಅದೃಷ್ಟದ ವರ್ಷವೆಂಬುದರಲ್ಲಿ ಎರಡು ಮಾತಿಲ್ಲ. ಟೆಸ್ಟ್ ಬೌಲರ್ ಹಾಗೂ ಆಲ್ ರೌಂಡರ್ ರ್ಯಾಂಕಿಂಗಿನಲ್ಲಿ ಅಗ್ರಶ್ರೇಣಿ ಪಡೆದು ಅವರು ಹೆಮ್ಮೆಯಲ್ಲಿ ಬೀಗಿದ್ದಾರೆ. ಆದರೆ ಸ್ಪಿನ್ ದಂತಕತೆಯೆಂದೇ ಪರಿಗಣಿತರಾಗಿರುವ ಇ ಪ್ರಸನ್ನ ಅವರು ಇತ್ತೀಚೆಗೆ ನೀಡಿದ ಸಲಹೆಯೊಂದಕ್ಕೆ ಅಶ್ವಿನ್ ಗೂಗ್ಲಿ ಎಸೆದರೇ ಎಂಬ ಸಂಶಯ ಕಾಡುತ್ತಿದೆ.
ಪ್ರಸಕ್ತ ವಿಶ್ವದಲ್ಲಿಯೇ ಅತ್ಯುತ್ತಮ ಬೌಲರ್ ಅಶ್ವಿನ್ ಆಗಿದ್ದಾರೆಂಬುದನ್ನು ಮಾನ್ಯ ಮಾಡುವ ಪ್ರಸನ್ನ ಅದೇ ಸಮಯ ಅಶ್ವಿನ್ ಬೌಲ್ ಮಾಡುವಾಗ ಬಾಲ್ ಗೆ ಸ್ವಲ್ಪ ‘ಫ್ಲೈಟ್ ನೀಡಬೇಕು’ ಎಂದು ಸಲಹೆ ನೀಡಿದ್ದರು. ‘‘ಬ್ಯಾಟ್ಸ್ ಮೆನ್ ಗಳು ಕ್ರೀಸ್ ನಿಂದ ಹೊರ ಬಂದು ಚೆಂಡನ್ನು ಅಟ್ಟಲು ಮುಂದಡಿಯಿಡುವಂತೆ ಮಾಡದ ಹೊರತು ಅಶ್ವಿನ್ ಗೆ ಕಷ್ಟವಿದೆ.ಅವರನ್ನು ನೊಡುತ್ತಿರುವಂತೆಯೇ ಅವರು ಹೇಗೆ ಬೌಲ್ ಮಾಡುತ್ತಾರೆಂದು ಬ್ಯಾಟ್ಸ್ ಮೆನ್ ಗಳಿಗೆ ತಿಳಿದು ಬಿಡುತ್ತದೆ’’ ಎಂದು ಪ್ರಸನ್ನ ಹೇಳಿದ್ದರು.
ಪ್ರಸನ್ನ ಅವರ ಹೇಳಿಕೆ ಬಗ್ಗೆ ವರದಿ ಮಾಡಿದ ಪತ್ರಿಕಾ ಸಂಸ್ಥೆಯೊಂದು ಇದನ್ನು ಅಶ್ವಿನ್ ಅವರಿಗೆ ಟ್ಯಾಗ್ ಮಾಡಿದಾಗ ಅವರು ಒಕೆ ಎಂಬ ಉತ್ತರ ಬರೆದು ನಮಸ್ಕಾರ್ ಚಿಹ್ನೆಯನ್ನೂ ಕಳುಹಿಸಿದ್ದರು. ಇದರರ್ಥ ಏನೆಂದು ತಿಳಿಯಲು ಮಹಾನ್ ಬುದ್ಧಿವಂತಿಕೆಯೇನೂ ಬೇಡ ಅಲ್ಲವೇ ?





