Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜ.6ರಿಂದ ಆಳ್ವಾಸ್ ಶಿಲ್ಪ ವಿರಾಸತ್,...

ಜ.6ರಿಂದ ಆಳ್ವಾಸ್ ಶಿಲ್ಪ ವಿರಾಸತ್, ಜ.11ರಿಂದ ಆಳ್ವಾಸ್ ವರ್ಣವಿರಾಸತ್ ಗೆ ಚಾಲನೆ

ವಾರ್ತಾಭಾರತಿವಾರ್ತಾಭಾರತಿ4 Jan 2017 4:55 PM IST
share

ಮೂಡುಬಿದಿರೆ, ಜ.4 :  ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ವು ವಿರಾಸತ್‌ನ ಅಂಗವಾಗಿ ಆಳ್ವಾಸ್ ಶಿಲ್ಪ ವಿರಾಸತ್ ಹಾಗೂ ಆಳ್ವಾಸ್ ವರ್ಣವಿರಾಸತ್‌ನ್ನು ಹಮ್ಮಿಕೊಂಡಿದ್ದು, ಜ.6ರಿಂದ ಆರಂಭಗೊಳ್ಳಲಿರುವ ಆಳ್ವಾಸ್ ಶಿಲ್ಪಸಿರಿಯಲ್ಲಿ ರಾಷ್ಟ್ರದ ಪ್ರಸಿದ್ಧ 20 ಚಿತ್ರಕಲಾವಿದರು ಹಾಗೂ 15 ಶಿಲ್ಪ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಆಳ್ವಾಸ್‌ನ ನುಡಿಸಿರಿ ಸಭಾಂಗಣದಲ್ಲಿ  ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ನಾಡಿನ ಹಿರಿಯ ಶಿಲ್ಪಕಲಾವಿದ ರಾಮಮೂರ್ತಿ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ.

ಆಳ್ವಾಸ್ ಶಿಲ್ಪ ವಿರಾಸತ್‌ನಲ್ಲಿ ಬುಡಕಟ್ಟು ಜನಾಂಗವಾದ ಬಸ್ತರ್‌ನ 5 ಕಲಾವಿದರು ಲೋಹ ಶಿಲ್ಪದಲ್ಲಿ ಕಂಚಿನ ಸ್ಥಳೀಯ ದೈವಗಳ ಮುಖವಾಡಗಳನ್ನು ಹಾಗೂ ವಿವಿಧ ವಿಗ್ರಹಗಳನ್ನು ರಚಿಸಲಿದ್ದಾರೆ. ನಾಡಿನ 10 ಶಿಲ್ಪ ಕಲಾವಿದರು ಮರದ ಕೆತ್ತನೆಯಲ್ಲಿ ಸುಮಾರು 4-6 ಅಡಿ ಎತ್ತರದ ಕೋಟಿ-ಚೆನ್ನಯ ಸೇರಿದಂತೆ ವಿವಿಧ ಕಲಾಕೃತಿಗಳನ್ನು ರಚಿಸಲಿದ್ದಾರೆ. ಮಧ್ಯಪ್ರದೇಶದ ಬನ್ಸಿಲಾಲ್ ಬೈಡ್, ರವೀಂದ್‌ನಾಗ್, ಆಕಾಶ್‌ನಾಗ್, ಅಮೀರ್‌ನಾಗ್, ಬೆಂಗಳೂರಿನ ರಾಮಮೂರ್ತಿ, ಶಿವಶಂಕರ್, ಚಿತ್ರದುರ್ಗದ ಮಂಜುನಾಥ ಆಚಾರ್ಯ, ಬಳ್ಳಾರಿಯ ಸಿದ್ಧರೂಢ, ದಕ್ಷಿಣ ಕನ್ನಡದ ಚಿದಾನಂದ ಹಾಗೂ ಶಶಿಕುಮಾರ್, ಕುಂದಾಪುರದ ಸಾಂಪ್ರಾಯಿಕ ಶಿಲ್ಪ ಕಲಾವಿದರಾದ ಕೃಷ್ಣಗುಡಿಗಾರ್, ಯತೀಶ್, ಗಣೇಶ್ ಆಚಾರ್, ಕುಮಾರ್ ಶಿಲ್ಪವಿರಾಸತ್‌ನಲ್ಲಿ ಭಾಗವಹಿಸಲಿದ್ದಾರೆ.

11ರಂದು ಅಳ್ವಾಸ್ ವರ್ಣವಿರಾಸತ್

ಜ.11ರಂದು ಆಳ್ವಾಸ್ ವರ್ಣ ವಿರಾಸತ್ ಆರಂಭಗೊಳ್ಳಲಿದ್ದು, ಆಳ್ವಾಸ್‌ನ ಆಯುರ್ವೇದ ಸೆಮಿನಾರ್ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಕುಂದಾಪುರ ಗುರುಕುಲ ಪಬ್ಲಿಕ್ ಸ್ಕೂಲ್‌ನ ಜಂಟಿ ಟ್ರಸ್ಟಿ ಅನುಪಮ ಹೆಗ್ಡೆ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಸಂಸ್ಥೆಯ ಅಧ್ಯಕ್ಷ ಡಾ ಎಂ.ಮೋಹನ ಆಳ್ವರು ಅಧ್ಯಕ್ಷತೆ ವಹಿಸಲಿದ್ದಾರೆ.

ಆಳ್ವಾಸ್ ವರ್ಣವಿರಾಸತ್‌ನಲ್ಲಿ ಮುಂಬಯಿ, ಒರಿಸ್ಸಾ, ಗುಜರಾತ್, ರಾಜಸ್ಥಾನ್, ತ್ರಿಪುರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರಸಿದ್ಧ 20 ಚಿತ್ರಕಲಾವಿದರು ತಲಾ ಎರಡು ಕಲಾಕೃತಿಗಳನ್ನು ರಚಿಸಲಿದ್ದಾರೆ. ಮುಂಬಯಿಯ ನೀಲೇಶ್ ಡಿ. ಭಾರ್ತಿ, ರಮೇಶ್ ಹರಿಪಚ್‌ಪಾಂಡೆ, ಸಾಗರ್‌ಬಂದ್ರೂ, ಅಮಿ ಪಠೇಲ್, ದೇವ್‌ದಾಸ್ ಶೆಟ್ಟಿ, ಒಡಿಸ್ಸಾದ ಸಂಗ್ರಾಮ್ ಕುಮಾರ್ ಮಾಂಜಿ, ಕೇರಳದ ಶ್ರೀಜಪಲ್ಲಂ, ದ್ರುವರಾಜ್ ಎನ್.ವಿ., ಸ್ಮಿಜಾವಿಜಯನ್, ವಿಜಯ ಕುಮಾರ್, ತ್ರಿಪುರದ ರವೀಂದೊ ದಾಸ್, ಗುಜರಾತಿನ ಕಿಶೋರ್ ನಾರ್ಖಂಡಿವಾಲಾ, ಹೈದಾರಾಬಾದಿನ ನಿರ್ಮಲಾಬಲುಕ, ಪಾಲಕ್‌ದುಬೆ, ತಮಿಳುನಾಡಿನ ಕಣ್ಣನ್, ಗಂಗಾಥರನ್, ಕರ್ನಾಟಕದ ಸಚ್ಚಿದಾನಂದ, ಗಣಪತಿ ಹೆಗ್ಡೆ, ಕಾಂತರಾಜುರವರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಜ.15ರಂದು 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಲಲಿತಾಕಲಾ ಅಕಾಡೆಮಿ, ನವದೆಹಲಿ ಇದರ ಮುಖ್ಯಸ್ಥ ಹಾಗೂ ಆಡಳಿತ ಅಧಿಕಾರಿ ಚಿ.ಸು.ಕೃಷ್ಣಸೆಟ್ಟಿ, ಬೆಂಗಳೂರಿನ ಪ್ರಸಿದ್ಧ ಬರಹಗಾರರಾದ ಗೋಪಾಲಕೃಷ್ಣರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 2017ನೇ ಸಾಲಿನ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿಗೆ ಆಯ್ಕೆಯಾದ ರಾಜಸ್ಥಾನದ ಹಿರಿಯ ಸಾಂಪ್ರಾದಾಯಿಕ ಕಲಾವಿದ ರೇವ ಶಂಕರ ಶರ್ಮಅವರು ಸಮಾರಂಭದಲ್ಲಿ ಉಪಸ್ಥಿತರಿರವರು ಎಂದು ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X