ಅಲ್ಟ್ರಾಟೆಕ್ 'ಉತ್ತಮ ಕಟ್ಟಡ ವಿನ್ಯಾಸಗಾರ' ಪ್ರಶಸ್ತಿಗೆ ಇಕ್ಬಾಲ್ ಪಿ.ಎಮ್ ಆಯ್ಕೆ

ಸಾಗರ, ಜ.4 : ಮಂಗಳೂರು ಕೇಂದ್ರ ವಿಭಾಗ ಮಟ್ಟದ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಸಂಸ್ಥೆ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ನೀಡುವ ಅಲ್ಟ್ರಾಟೆಕ್ ಅವಾರ್ಡ್ 2016 ನೇ ಸಾಲಿನ ಉತ್ತಮ ಕಟ್ಟಡ ವಿನ್ಯಾಸಗಾರ ಪ್ರಶಸ್ತಿಯನ್ನು ಇಕ್ಬಾಲ್ ಪಿ.ಎಮ್ ಅವರಿಗೆ ಲಭಿಸಿದೆ.
ಇವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾಕಷ್ಟು ಕಟ್ಟಡಗಳಿಗೆ ವಿನ್ಯಾಸ ಮಾಡಿದ್ದು , ಅದರಲ್ಲಿ ಕುಂದಾಪುರ ತಾಲ್ಲೂಕಿನ ಗಂಗೊಳ್ಳಿಯ ಕೈರ್ ಮಂಜಿಲ್ ಗೆ ನೀಡಿದ ಅದ್ಭುತವಾದ ವಿನ್ಯಾಸಕ್ಕೆ ಈ ಪ್ರಶಸ್ತಿ ದೊರಕಿದೆ.
ಇವರ ಈ ಸಾಧನೆಗೆ ಸಾಗರದ 31 ಬೀಡಿ ಮಾಲಕರಾದ ಜಿ ಅಬ್ದುಲ್ ಖಾದರ್‌ರವರು ಅಭಿನಂದನೆ ಸಲ್ಲಿಸಿದ್ದಾರೆ.
Next Story





