ಬಿರ್ಕನಕಟ್ಟೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ: ಶಾಸಕ ಲೋಬೊ
ಮಂಗಳೂರು, ಜ.4: ನಗರದ ಬಿರ್ಕನಕಟ್ಟೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗ ಇರುವ ಮಾರುಕಟ್ಟೆ ಅಂಗಡಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿ ಮಾರುಕಟ್ಟೆ ಕೆಲಸವನ್ನು ಪ್ರಾರಂಭಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಬಿರ್ಕನಕಟ್ಟೆಯ ಮಾರುಕಟ್ಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡುತ್ತಿದ್ದರು.
ಈಗ ಇರುವ ವಾರದ ಸಂತೆಯನ್ನು ಕೂಡಾ ಸ್ಥಳಾಂತರಗೊಳಿಸಲಾಗುವುದು ಎಂದ ಶಾಸಕ ಲೋಬೊ, ಡ್ರೈನೇಜ್ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸುಸಜ್ಜಿತ ಮಾರುಕಟ್ಟೆಯಾದಲ್ಲಿ ಕೋಳಿ ಮಾರಾಟ, ಮಾಂಸ ಮತ್ತು ಮೀನು ಮಾರಾಟಕ್ಕೆ ಪ್ರತ್ಯೇಕ ಅಂಗಡಿಗಳನ್ನು ನಿರ್ಮಿಸಲಾಗುವುದು. ತಕ್ಷಣ ಮಾರುಕಟ್ಟೆ ಬಗ್ಗೆ ಸರ್ವೇ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭ ಮಾಜಿ ಮೇಯರ್ ಅಬ್ದುಲ್ ಅಝೀಝ್, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಡೆಂಝಿಲ್, ನೆಲ್ಸನ್, ಸ್ಟ್ಯಾನಿ ಆಳ್ವಾರಿಸ್, ಅಲ್ವಿನ್ ಪಾಯಸ್, ಮನಪಾ ಇಂಜಿನಿಯರ್ ಉಪಸ್ಥಿತರಿದ್ದರು.
Next Story