ಟೀಸ್ಟಾ ವಿರುದ್ಧ ಸಿಬಿಐಯಿಂದ ಆರೋಪ ಪಟ್ಟಿ ದಾಖಲು

ಹೊಸದಿಲ್ಲಿ,ಜ.4: ವಿದೇಶಿ ಫಂಡ್ ಕಾನೂನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತೆ ಟೀಸ್ಟಾ ಸೆಟಲ್ವಾಡ್ ಹಾಗೂ ಪತಿ ಜಾವೇದ್ ಆನಂದ್‌ರ ಸ್ವಯಂಸೇವಾ ಸಂಸ್ಥೆ ಸಬ್ರಂಗ್ ಕಮ್ಯುನಿಕೇಶನ್ಸ್ ಆಂಡ್ ಪಬ್ಲಿಶಿಂಗ್ ಟ್ರಸ್ಟ್ ಲಿಮಿಟೆಡ್ ವಿರುದ್ಧ ಸಿಬಿಐ ಆರೋಪ ಪಟ್ಟಿ ದಾಖಲಿಸಿದೆ.
ಟೀಸ್ಟಾ ದಂಪತಿ ಹಾಗೂ ಅವರ ಟ್ರಸ್ಟ್ ಕೇಂದ್ರ ಗೃಹಸಚಿವಾಲಯದ ಪೂರ್ವಾನುಮತಿ ಪಡೆಯದೆ ವಿದೇಶದಿಂದ ಫಂಡ್ ಸ್ವೀಕರಿಸುವ ಮೂಲಕ ವಿದೇಶಿ ಫಂಡ್ ನಿಯಂತ್ರಣ ಕಾನೂನು ಉಲ್ಲಂಘಿಸಿದ್ದಾರೆಂದು ಪ್ರಕರಣ ದಾಖಲಾಗಿತ್ತು
Next Story





