ಬಂಡೋಪಾಧ್ಯಾಯ ಬಂಧನವನ್ನು ವಿರೋಧಿಸಿ ಪ್ರಧಾನಿ ನಿವಾಸಕ್ಕೆ ಜಾಥಾ ನಡೆಸುತ್ತಿದ್ದ ಟಿಎಂಸಿ ಸಂಸದರ ಸೆರೆ

ಹೊಸದಿಲ್ಲಿ,ಜ.4: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳವಾರ ಲೋಕಸಭೆಯಲ್ಲಿ ಟಿಎಂಸಿ ನಾಯಕ ಸುದೀಪ್ ಬಂಡೋಪಾಧ್ಯಾಯ ಅವರ ಬಂಧನವನ್ನು ವಿರೋಧಿಸಿ ಇಂದು ಪ್ರಧಾನಿ ನಿವಾಸಕ್ಕೆ ಪ್ರತಿಭಟನಾ ಜಾಥಾದಲ್ಲಿ ತೆರಳುತ್ತಿದ್ದ ತೃಣಮೂಲ ಕಾಂಗ್ರೆಸ್‌ನ ಸಂಸದರನ್ನು ದಾರಿಮಧ್ಯೆಯೇ ಪೊಲೀಸರು ಬಂಧಿಸಿದರು.
ಪ್ರಧಾನಿ ನಿವಾಸದತ್ತ ನಾವು ಶಾಂತಿಯುತವಾಗಿ ಜಾಥಾ ನಡೆಸುತ್ತಿದ್ದೆವು. ಆದರೆ ಪೊಲೀಸರು ಅರ್ಧದಲ್ಲಿಯೇ ತಡೆದು ನಮ್ಮನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಮ್ಮ ಕೆಲವು ಸಂಸದರ ಮೇಲೆ ಅವರು ಹಲ್ಲೆಯನ್ನೂ ನಡೆಸಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ ಟಿಎಂಸಿ ನಾಯಕ ಸೌಗತ್ ರಾಯ್ ಅವರು, ಪ್ರತಿಭಟನಾ ಜಾಥಾದಲ್ಲಿ ಪಕ್ಷದ 36 ಸಂಸದರು ಭಾಗಿಯಾಗಿದ್ದರು. ಮೋದಿ ಸರಕಾರದ ಅನ್ಯಾಯದ ವಿರುದ್ಧ ಧ್ವನಿಯೆತ್ತುವುದನ್ನು ಅವರು ಮುಂದುವರಿಸಲಿದ್ದಾರೆ ಎಂದರು.
ರೋಸ್ ವ್ಯಾಲಿ ಚಿಟ್ ಫಂಡ್ ಹಗರಣ ಪ್ರಕರಣದಲ್ಲಿ ಬಂಡೋಪಾಧ್ಯಾಯ ಅವರನ್ನು ಸಿಬಿಐ ಮಂಗಳವಾರ ಬಂಧಿಸಿದೆ.
ಬಂಡೋಪಾಧ್ಯಾಯ ಹಗರಣಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ಬಂಧಿಸಲ್ಪಟ್ಟಿರುವ ಎರಡನೇ ಟಿಎಂಸಿ ಸಂಸದರಾಗಿದ್ದಾರೆ. ಕಳೆದ ಶುಕ್ರವಾರ ನಟ-ರಾಜಕಾರಣಿ ತಪಸ್ ಪಾಲ್ ಅವರನ್ನು ಸಿಬಿಐ ಬಂಧಿಸಿತ್ತು.





