ನಾಳೆ ಕಿಲ್ಲೂರು ಸ್ವಲಾತ್
ಬೆಳ್ತಂಗಡಿ, ಜ.4 : ಕಿಲ್ಲೂರು ಮುಹಿಯುದ್ದೀನ್ ಜುಮಾ ಮಸೀದಿ ಅಧೀನದ ನೂರುಲ್ ಇಸ್ಲಾಂ ಯಂಗ್‌ಮೆನ್ಸ್ ಎಸೋಸಿಯೇಶನ್ ಇದರ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ಮಾಸಿಕ ಸ್ವಲಾತ್ ಮಜ್ಲಿಸ್ ವಸೀಲತುಲ್ಲಾ ಕಾರ್ಯಕ್ರಮವು ಜನವರಿ 5 ರಂದು(ಇಂದು) ಮಗ್ರಿಬ್‌ನ ಮಾರ್ಬಳಿಕ ಮಸೀದಿಯಲ್ಲಿ ನಡೆಯಲಿದೆ.
ಕಿಲ್ಲೂರು ಎಂ.ಜೆ.ಎಂ. ಅಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಸಖಾಫಿ ಅಲ್-ಹೈದ್ರೋಸಿ ತಂಙಳ್ ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸಲಿದ್ದು, ಸಯ್ಯಿದ್ ಮುತ್ತುಕೋಯ ತಂಙಳ್ ಅಲ್-ಹೈದ್ರೋಸಿ ಎಮ್ಮೆಮಾಡು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಯ್ಯಿದ್ ಮುಹಮ್ಮದ್‌ಖಾತಿಂ ಸಖಾಫಿ , ಅಲ್-ಹೈದ್ರೋಸಿ ತಂಙಳ್ ಎಮ್ಮೆಮಾಡು ಮತ್ತು ಬಳಗದವರಿಂದ ಬುರ್‌ದಾ ಆಲಾಪನೆ ನಡೆಯಲಿದ್ದು, ಸ್ಥಳೀಯ ಮದ್ರಸ ಮುಖ್ಯಶಿಕ್ಷಕ ಮುಹಮ್ಮದ್ ಹಾರಿಸ್ ಸಖಾಫಿ, ಸಹ ಶಿಕ್ಷಕರುಗಳಾದ ಹೈದರ್‌ಮುಸ್ಲಿಯಾರ್, ಅಬ್ದುಲ್‌ಅಝೀರ್ಲತೀಫಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





