ಜ.8ರಂದು ಸುರತ್ಕಲ್‌ನಲ್ಲಿ ‘ಕುಡ್ಲ ತುಳು ಮಿನದನ’
ಮಂಗಳೂರು, ಜ.4: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಬಂಟರ ಸಂಘ (ರಿ) ಸುರತ್ಕಲ್ ಹಾಗೂ ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇವರ ಸಹಯೋಗದೊಂದಿಗೆ ಜ.8ರಂದು ಬೆಳಗ್ಗೆ 9ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ‘ಕುಡ್ಲ ತುಳು ಮಿನದನ’ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ.ಬಿ.ಎಂ. ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಿತನುಡಿಯಲಿದ್ದಾರೆ.
ಶಾಸಕ ಬಿ.ಎ. ಮೊಯ್ದಿನ್ ಬಾವಾ ಅಧ್ಯಕ್ಷತೆ ವಹಿಸುವರು.
ಸಚಿವ ಯು. ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ದ.ಕ.ಜಿಪಂ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೆ. ಅಭಯಚಂದ್ರ ಜೈನ್, ಜೆ. ಆರ್. ಲೋಬೊ, ಮೇಯರ್ ಕೆ. ಹರಿನಾಥ, ಕಂದಾಯ ಇಲಾಖೆಯ ಯೋಜನಾ ವ್ಯವಸ್ಥಾಪಕ ಕೆ. ಸುಧಾಕರ ಶೆಟ್ಟಿ ಬಾಳ, ಬೆಂಗಳೂರು, ಹರಿಕೃಷ್ಣ ಪುನರೂರು, ಟಿ. ರವೀಂದ್ರ ಪೂಜಾರಿ, ಮಂಗಳೂರು ತಾಲೂಕು ನಾಗರಿಕ ಸಮಿತಿಯ ಅಧ್ಯಕ್ಷ ಸುಭಾಷ್‌ಚಂದ್ರ ಶೆಟ್ಟಿ, ನಮ್ಮ ಕುಡ್ಲ ಟಿ.ವಿ. ಚಾನೆಲ್ ನಿರ್ದೇಶಕ ಲೀಲಾಕ್ಷ ಕರ್ಕೇರ, ಕಾರ್ಪೊರೇಟರ್ ಗುಣಶೇಖರ ಶೆಟ್ಟಿ ಸುರತ್ಕಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ, ಮಾತುಕತೆ ಹಾಗೂ ತುಳು ಕವಿಕೂಟ ನಡೆಯಲಿದೆ.
‘ತುಳು ಬಾಸೆದ ಒರಿಪು ಮತ್ತು ಬುಲೆಚಿಲ್‌ಡ್ ಮಾದ್ಯಮೊಲೆದ ಪಾಲ್’ ಎನ್ನುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಈಶ್ವರ ದೈತೋಟ ವಹಿಸಲಿದ್ದಾರೆ.
ಪತ್ರಕರ್ತ ಮನೋಹರ ಪ್ರಸಾದ್, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ, ಟಿ.ವಿ. ಚಾನೆಲ್ ನಿರೂಪಕ ಪ್ರೊ. ಎಂ.ಎಸ್. ಕೋಟ್ಯಾನ್ ವಿಚಾರಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ರೂಪಕಲಾ ಆಳ್ವ, ಮೋಹನ್ ಕೊಪ್ಪಲ ಕದ್ರಿ, ಪ್ರೊ.ಡಿ. ವೇದಾವತಿ, ಜಯಶೀಲಾ ಮತ್ತಿತರರು ಉಪಸ್ಥಿತರಿದ್ದರು.







