ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ಸೌದಿ ಪುನರಾಯ್ಕೆ

ರಿಯಾದ್, ಜ. 4: ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಅಸ್ಥಿರತೆ ಮತ್ತು ಸ್ಫೋಟಕ ಪರಿಸ್ಥಿತಿಯ ನಡುವೆಯೇ, ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ಅಕ್ಟೋಬರ್‌ನಲ್ಲಿ ಮರು ಆಯ್ಕೆಯಾಗಿರುವ ಸೌದಿ ಅರೇಬಿಯದ ಮೂರು ವರ್ಷಗಳ ಅವಧಿ ರವಿವಾರ ಆರಂಭಗೊಂಡಿದೆ.
ಮಂಡಳಿಯಲ್ಲಿ ಸೌದಿ ಅರೇಬಿಯದ ಅವಧಿ 2019 ಡಿಸೆಂಬರ್ 31ರಂದು ಕೊನೆಗೊಳ್ಳಲಿದೆ.
ಜಗತ್ತಿನಲ್ಲಿ ಮಾನವಹಕ್ಕುಗಳ ರಕ್ಷಣೆ ಮತ್ತು ಉತ್ತೇಜನೆಯ ಜವಾಬ್ದಾರಿ ಸೌದಿ ಅರೇಬಿಯ ಮತ್ತು ಇತರ 13 ನೂತನ ಸದಸ್ಯ ರಾಷ್ಟ್ರಗಳಿಗಿದೆ. ಅದೇ ವೇಳೆ, ಜಾಗತಿಕ ಮಟ್ಟದಲ್ಲಿ ಮಾನವಹಕ್ಕು ಉಲ್ಲಂಘನೆಗಳನ್ನು ನಿಭಾಯಿಸುವ ಜವಾಬ್ದಾರಿಯೂ ಈ ದೇಶಗಳಿಗಿದೆ.
‘‘ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ಎರಡನೆ ಬಾರಿ ಸೇರ್ಪಡೆಯಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಸೌದಿ ಅರೇಬಿಯದ ಬೆಳೆಯುತ್ತಿರುವ ಪ್ರತಿಷ್ಠೆ ಹಾಗೂ ಸೌದಿ ನಾಯಕತ್ವದ ಮೇಲೆ ಅಂತಾರಾಷ್ಟ್ರೀಯ ಸಮುದಾಯ ಹೊಂದಿರುವ ವಿಶ್ವಾಸವನ್ನು ಸೂಚಿಸುತ್ತದೆ’’ ಎಂದು ರಾಷ್ಟ್ರೀಯ ಮಾನವಹಕ್ಕುಗಳ ಸಂಸ್ಥೆಯ ಸ್ಥಾಪಕ ಸದಸ್ಯ ಇಬ್ರಾಹೀಮ್ ಅಲ್-ಖಾಯಿದ್ ಇಲ್ಲಿ ಮಂಗಳವಾರ ತಿಳಿಸಿದರು.





