ಅಮೆರಿಕ ಕಾಂಗ್ರೆಸ್ ಸದಸ್ಯರಾಗಿ 5 ಭಾರತೀಯ ಅಮೆರಿಕನ್ನರಿಂದ ಪ್ರಮಾಣ

ವಾಶಿಂಗ್ಟನ್, ಜ. 4: ಐವರು ಭಾರತೀಯ ಅಮೆರಿಕನ್ನರು ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕದ ಜನಸಂಖ್ಯೆಯ ಕೇವಲ ಒಂದು ಶೇಕಡದಷ್ಟಿರುವ ಸಮುದಾಯಕ್ಕೆ ಇದೊಂದು ದಾಖಲೆಯೇ ಆಗಿದೆ.
52 ವರ್ಷದ ಕಮಲಾ ಹ್ಯಾರಿಸ್ ಮಂಗಳವಾರ ಕ್ಯಾಲಿಫೋರ್ನಿಯ ಸೆನೆಟರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ಅವರ ತಾಯಿ ಭಾರತದವರು ಹಾಗೂ ತಂದೆ ಜಮೈಕದ ಆಫ್ರಿಕನ್ ಜನಾಂಗದವರು.
ಇದಾದ ಕೆಲವೇ ಗಂಟೆಗಳ ಬಳಿಕ ಹೌಸ್ ಚೇಂಬರ್ಸ್‌ನ ಸದಸ್ಯರಾಗಿ ನಾಲ್ವರು ಭಾರತೀಯ ಅಮೆರಿಕನ್ನರು ಪ್ರಮಾಣವಚನ ಸ್ವೀಕರಿಸಿದರು.
ಅವರ ಪೈಕಿ ಆಮಿ ಬೇರಾ ಸತತ ಮೂರು ಬಾರಿ ಕಾಂಗ್ರೆಸ್‌ಗೆ ಆಯ್ಕೆಯಾಗಿದ್ದಾರೆ.
ಸಿಲಿಕಾನ್ ವ್ಯಾಲಿಯನ್ನು ಪ್ರತಿನಿಧಿಸುವ ರೋ ಖನ್ನಾ (40) ಇದೇ ಸಂದರ್ಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇಲಿನಾಯಿಸ್‌ನಿಂದ ಕಾಂಗ್ರೆಸ್‌ಗೆ ಆಯ್ಕೆಯಾಗಿರುವ 42 ವರ್ಷದ ಕೃಷ್ಣಮೂರ್ತಿ ಗೀತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಅಮೆರಿಕದ ಕಾಂಗ್ರೆಸ್‌ಗೆ ಆಯ್ಕೆಯಾಗಿರುವ ಮೊದಲ ಹಿಂದೂ ಎಂಬ ಹೆಗ್ಗಳಿಕೆ ಹೊಂದಿರುವ ಹವಾಯಿ ಪ್ರತಿನಿಧಿಸುವ ತುಳಸಿ ಗಬ್ಬಾರ್ಡ್ ಸತತ ಮೂರನೆ ಬಾರಿಗೆ ಕಾಂಗ್ರೆಸ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಪ್ರವೇಶ ಪಡೆದ ಮೊದಲ ಭಾರತೀಯ ಅಮೆರಿಕನ್ ಮಹಿಳೆ ಪ್ರಮೀಳಾ ಜಯಪಾಲ್ (51) ಕೂಡ ಈ ಸಂದರ್ಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು.







