ಏಡ್ಸ್ ಚಿಕಿತ್ಸೆಗೆ ಬಿಲ್ ಗೇಟ್ಸ್ ಸಂಸ್ಥೆಯಿಂದ 950 ಕೋಟಿ ರೂ. ನಿಧಿ

ಹೂಸ್ಟನ್ (ಅಮೆರಿಕ), ಜ. 4: ಎಚ್‌ಐವಿ ತಡೆಗಟ್ಟುವ ಔಷಧ ಅಭಿವೃದ್ಧಿಪಡಿಸುವುದಕ್ಕಾಗಿ ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಅವರ ದತ್ತಿ ಸಂಸ್ಥೆ ‘ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ 140 ಮಿಲಿಯ ಡಾಲರ್ (ಸುಮಾರು 950 ಕೋಟಿ ರೂಪಾಯಿ) ಹೂಡಿಕೆ ಮಾಡಿದೆ.
ಏಡ್ಸ್ ಚಿಕಿತ್ಸೆಯಲ್ಲಿ ಕ್ರಾಂತಿಯನ್ನೇ ತರಬಲ್ಲ ನೂತನ ತಂತ್ರಜ್ಞಾನದ ಆವಿಷ್ಕಾರಕ್ಕಾಗಿ ಸಂಸ್ಥೆಯು ನಿಧಿ ಪೂರೈಸುತ್ತಿದೆ.
ಪ್ರಸಕ್ತ ತಡೆಗಟ್ಟುವ ಮಾತ್ರೆಗಳು ಲಭ್ಯವಿವೆ. ಅವುಗಳನ್ನು ಪ್ರತಿದಿನ ತೆಗೆದುಕೊಂಡರೆ ವ್ಯಕ್ತಿಯು ಎಚ್‌ಐವಿ ಸೋಂಕಿಗೆ ಒಳಗಾಗುವ ಸಂಭವನೀಯತೆ ಕಡಿಮೆಯಾಗುತ್ತದೆ.
ನೂತನ ಇಂಪ್ಲಾಂಟ್ ತಂತ್ರಜ್ಞಾನವನ್ನು ಎಚ್‌ಐವಿ ಸೋಂಕಿಗೆ ಸುಲಭವಾಗಿ ತುತ್ತಾಗುವ ಜನರಿಗೆ ನಿರಂತರ ಔಷಧಗಳನ್ನು ಪೂರೈಸಲು ಬಳಸಬಹುದಾಗಿದೆ.
Next Story





