ಸುಳ್ಯ ಮೆಡಿಕಲ್ ಕಾಲೇಜಿನಲ್ಲಿ ರ‍್ಯಾಗಿಂಗ್ : ವಿದ್ಯಾರ್ಥಿಗಳ ಬಂಧನ

ಸುಳ್ಯ , ಜ.4 : ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ 10 ವಿದ್ಯಾರ್ಥಿಗಳ ಬಂಧನವಾಗಿರುವ ಘಟನೆ ನಡೆದಿದೆ.
ಹಿರಿಯ ವಿದ್ಯಾರ್ಥಿಗಳಿಂದ ಕಿರುಕುಳ ಆರೋಪದ ಮೇರೆಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ನಿಶಾಂತ್ (20) ದೂರು ನೀಡಿದ ವಿದ್ಯಾರ್ಥಿಯಾಗಿದ್ದಾನೆ.
ಬಂಧನಕ್ಕೊಳಗಾದ ವಿದ್ಯಾರ್ಥಿಗಳನ್ನು ಕೃಷ್ಣಕುಮಾರ್, ನೀರಜ್, ಅಮಲ್, ಕಣ್ಣನ್ , ಫರ್ಹಾನ್ ಮುಹಮ್ಮದ್, ಸಂಜಯ್ ಕೃಷ್ಣನ್ , ಏಬಲ್, ಜತಿನ್ ಬೋಷ್, ವಾಸಿಂ, ನಿಬಿನ್ ರಹೀಂ ಎಂದು ಗುರುತಿಸಲಾಗಿದೆ.
ಆರೋಪಿ ವಿದ್ಯಾರ್ಥಿಗಳು ಕಸಬಾ ಗ್ರಾಮದಲ್ಲಿ ಕಣ್ಣನ್ ಅವರ ರೂಮಿಗೆ ಸಂತ್ರಸ್ತ ವಿದ್ಯಾರ್ಥಿ ನಿಶಾಂತ್ ಮತ್ತು ಅವನ ಸಹಪಾಠಿಗಳನ್ನು ಕರೆಸಿಕೊಂಡು ಅವ್ಯಾಚ್ಯವಾಗಿ ನಿಂದಿಸಿ , ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಹಿರಿಯ ವಿದ್ಯಾರ್ಥಿಗಳಿಗೆ ಗೌರವ ಕೊಡುವುದನ್ನು ಹೇಳಿ ಕೊಡಬೇಕಾ ? ಎಂಬಂತಹ ಮಾತುಗಳ ಮೂಲಕ ನಿಂದಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಕರ್ನಾಟಕ ಎಜ್ಯುಕೇಶನ್ ಆ್ಯಕ್ಟ್ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ವಿದ್ಯಾರ್ಥಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕ್ರಮ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಬಂಧಿತ ವಿದ್ಯಾರ್ಥಿಗಳು ಕೇರಳ ಮೂಲದವರೆಂದು ತಿಳಿದು ಬಂದಿದೆ.







