ಟ್ವಿಟರ್ ಅಧ್ಯಕ್ಷರನ್ನು ಅಮೆರಿಕ ತಾಳಿಕೊಳ್ಳದು: ಸೆನೆಟರ್

ವಾಶಿಂಗ್ಟನ್, ಜ. 4: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಟ್ವಿಟರ್ ಚಾಳಿಯನ್ನು ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕ ಚಕ್ ಶುಮರ್ ಖಂಡಿಸಿದ್ದಾರೆ.
ಕಾಂಗ್ರೆಸ್‌ನ 115ನೆ ಅಧಿವೇಶನದ ಆರಂಭಿಕ ದಿನದಲ್ಲಿ ಮಾತನಾಡಿದ ಅವರು, ಟ್ವಿಟರ್ ಅಧ್ಯಕ್ಷರನ್ನು ಅಮೆರಿಕ ತಾಳಿಕೊಳ್ಳದು ಎಂದು ಹೇಳಿದರು.
‘‘ಟ್ವಿಟರ್ ಅಧ್ಯಕ್ಷರು ಅಮೆರಿಕಕ್ಕೆ ಹೇಳಿಸಿದವರಲ್ಲ ಎಂದು ನಾನು ಗೌರವಪೂರ್ವಕವಾಗಿ ಹೇಳುತ್ತೇನೆ. ನಾವು ನೈಜ ಸವಾಲುಗಳನ್ನು ಹೊಂದಿದ್ದೇವೆ ಹಾಗೂ ಅದಕ್ಕೆ ನೈಜ ಪರಿಹಾರಗಳನ್ನು ನಾವು ಕಂಡುಹಿಡಿಯಬೇಕಾಗಿದೆ’’ ಎಂದು ಸೆನೆಟ್ ಪ್ರತಿಪಕ್ಷ ನಾಯಕರಾಗಿ ಮಾಡಿದ ಮೊದಲ ಭಾಷಣದಲ್ಲಿ ಅವರು ಹೇಳಿದರು.
Next Story





