ನಿಮ್ಮ ಮಕ್ಕಳು ಹಿಂದೂಗಳೇ, ಮುಸ್ಲಿಮರೇ ಎಂಬ ಪ್ರಶ್ನೆಗೆ ಶಿರೀಶ್ ನೀಡಿದ ಉತ್ತರವೇನು ?

ಮುಂಬೈ, ಜ. 4 : ಶಿರೀಶ್ ಕುಂದರ್ ಟ್ವೀಟ್ ಮಾಡಿದರೆಂದರೆ ಅಲ್ಲೇನಾದರೂ ವಿಶೇಷ ಇರಲೇಬೇಕು. ತಮಾಷೆ, ವ್ಯಂಗ್ಯ, ಚಾಟಿ ಎಲ್ಲವೂ ಅಲ್ಲಿ ಮೇಳೈಸಿರುತ್ತದೆ. ಶಿರೀಶ್ ರ ಅಂತಹದೇ ಒಂದು ಟ್ವೀಟ್ ಈಗ ಸೂಪರ್ ಹಿಟ್ ಆಗಿ ಬಿಟ್ಟಿದೆ.
ಆಗಿದ್ದೇನೆಂದರೆ, ತನ್ನ ಪತ್ನಿ ಹಾಗು ಮಕ್ಕಳಾದ ಸಿಝಾರ್ , ಅನ್ಯ ಹಾಗು ದಿವಾ ಅರಿಝೋನಾದ ಗ್ರ್ಯಾನ್ಡ್ ಕಾನ್ಯೋನ್ ನಲ್ಲಿ ರಜೆಯ ಮಜಾ ಅನುಭವಿಸುತ್ತಿರುವ ಸುಂದರ ಚಿತ್ರವೊಂದನ್ನು ಶಿರೀಶ್ ಟ್ವೀಟ್ ಮಾಡಿದ್ದರು. ಎಂದಿನಂತೆ ಅದಕ್ಕೊಂದು ತಮಾಷೆಯ ಶೀರ್ಷಿಕೆಯನ್ನೂ ಶಿರೀಶ್ ಕೊಟ್ಟಿದ್ದರು.
" ನನ್ನನ್ನು ಗ್ರ್ಯಾನ್ಡ್ ಕಾನ್ಯೋನ್ ನಿಂದ ಕೆಳಗೆ ಎಸೆದ ಬಳಿಕ ನನ್ನ ಪತ್ನಿ , ಮಕ್ಕಳು ಮಜಾ ಅನುಭವಿಸುತ್ತಿರುವ ಚಿತ್ರ. ಇಲ್ಲಿ ಸಮಯ ಯಾವುದೆಂದೇ ಗೊತ್ತಾಗುವುದಿಲ್ಲ. 2017 ಬಂದಿದೆಯೇ ? " ಎಂದು ಶಿರೀಶ್ ಬರೆದಿದ್ದರು.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಫಾತಿಮಾ ಆರ್ಯ ಎಂಬವರು " ನಿಮ್ಮ ಮಕ್ಕಳು ಹಿಂದೂಗಳೇ ಅಥವಾ ಮುಸ್ಲಿಮರೇ " ಎಂದು ಕೇಳಿ ಬಿಟ್ಟರು. ಶಿರೀಶ್ ಗೆ ಇಂತಹ ಪ್ರಶ್ನೆ ಕೇಳಿದ ಮೇಲೆ ಕೇಳಬೇಕೆ ? ಅವರು ಅದಕ್ಕೆ ನೀಡಿದ ಉತ್ತರ " ಅದು ಬರಲಿರುವ ಹಬ್ಬದ ಮೇಲೆ ಅವಲಂಬಿಸಿದೆ. ಕಳೆದ ತಿಂಗಳು ಅವರು ಕ್ರೈಸ್ತರಾಗಿದ್ದರು ( ಕ್ರಿಸ್ಮಸ್ ಆಚರಿಸಲು) " ಎಂದು ಉತ್ತರಿಸಬೇಕೇ ?
ಈಗ ಶಿರೀಶ್ ರ ಉತ್ತರದ ಟ್ವೀಟ್ ವೈರಲ್ ಆಗಿದೆ . 4,600 ಲೈಕ್ ಗಳನ್ನು ಬಾಚಿಕೊಂಡಿರುವ ಈ ಟ್ವೀಟ್ 2,300 ಬಾರಿ ರಿಟ್ವೀಟ್ ಆಗಿದೆ.
Depends on which festival is next. Last month, they were Christians. https://t.co/tvYl5n4ugX
— Shirish Kunder (@ShirishKunder) January 3, 2017
@ShirishKunder Your Kids Hindus or Muslims ?
— Fatima Arya (@XMuslimFatima) January 3, 2017
My family, proudly posing at the top of the Grand Canyon, after throwing me into it.
— Shirish Kunder (@ShirishKunder) January 3, 2017
No idea of time here. Is it 2017 yet? pic.twitter.com/lbiBlfXPam
@ShirishKunder best thing i read on twitter for a long time.
— Bachelor! (@Viratian05) January 3, 2017







