ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಉಮೇಶ್ ಮನೆಗೆಅಭಯ ಚಂದ್ರ ಜೈನ್ ಭೇಟಿ
ಮುಲ್ಕಿ, ಜ.4: ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಕಿನ್ನಿಗೋಳಿ ಸಮೀಪದ ಕಿಲೆಂಜೂರು ನಿವಾಸಿ ಉಮೇಶ್ ಶೆಟ್ಟಿ ಮನೆಗೆ ಶಾಸಕ ಅಭಯ ಚಂದ್ರ ಜೈನ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಉಮೇಶ್ ಅವರ ತಂದೆ ರಾಮಕೃಷ್ಣ ಶೆಟ್ಟಿ ಅವರನ್ನು ಸಂತೈಸಿದ ಸಚಿವರು, ಪ್ರಕರಣ ಸಂಬಂಧ ತನಿಖೆ ತೀವೃಗೊಳಿಸಲು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಅತಿಕಾರಿಬೆಟ್ಟು ಪಂಚಾಯತ್ ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪುಣಿ ಗುತ್ತು, ಕಾಂಗ್ರೆಸ್ ಮುಖಂಡರಾದ ಮಯ್ಯದಿ ಪಕ್ಷಿಕೆರೆ, ಬಾಲದಿತ್ಯ ಆಳ್ವ, ನವೀನ್ ಕಟೀಲ್, ಅಶೋಕ್ ಪೂಜಾರ್, ಪುತ್ತು ಬಾವ, ದೀಪಕ್ ಕೆಮ್ರಾಲ್, ಸುರೇಶ್ ಪಂಜ, ಅಶ್ವಿನಿ ಆಳ್ವ, ಸುನಿಲ್ ಕಿಲೆಂಜೂರು, ಕಿರಣ್ ಪಕ್ಷಿಕೆರೆ, ಮಂಜುನಾಥ ಕಂಬಾರ, ಹರೀಶ್ ಶೆಟ್ಟಿ ಸಿಮಂತೂರು ಮತ್ತಿತರರಿದ್ದರು.
Next Story





