ಮೂಡುಬಿದರೆ : ರಬ್ಬರ್ ಒಣಗಿಸುವ ಡ್ರೈಯರ್ ಉದ್ಘಾಟನೆ

ಮೂಡುಬಿದರೆ, ಜ.4 : ಮೂಡುಮಾರ್ನಾಡು ಗ್ರಾಮದ ಮೂಜಿಮಲೆಯ ಕೃಷಿಕ ಮರಿಯನ್ ವಾಸ್ ಅವರು ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಕೇರಳ ಮಾದರಿಯ ರಬ್ಬರ್ ಒಣಗಿಸುವ ಡ್ರೈಯರನ್ನು ಆನೆಗುಡ್ಡೆ ಚರ್ಚ್‌ನ ಧರ್ಮಗುರು ರೆ.ಫಾ.ಜೆರಾಲ್ಡ್ ಫ್ರಾನ್ಸಿಸ್ ಫೆರ್ನಾಂಡಿಸ್ ಮಂಗಳವಾರ ಉದ್ಘಾಟಿಸಿದರು.
ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ದರೆಗುಡ್ಡೆ ಗ್ರಾ.ಪಂ. ಸದಸ್ಯ ಸುಭಾಶ್ಚಂದ್ರ ಚೌಟ, ಉಪಾಧ್ಯಕ್ಷ ಮುನಿರಾಜ ಜೈನ್ , ಸದಸ್ಯರಾದ ಜಯಕುಮಾರ್, ಸಂತೋಷ್, ಶಿರ್ತಾಡಿ ಪಂಚಾಯತ್ ಸದಸ್ಯ ಪ್ರವೀಣ್ ಕುಮಾರ್, ತಾ.ಪಂ. ಸದಸ್ಯ ಪ್ರಶಾಂತ್ ಅಮೀನ್, ಮಾಜಿ ಜಿ.ಪಂ. ಸದಸ್ಯ ಗೋಪಾಲ, ವಾಳೆಯ ಗುರಿಕಾರ ದಿಲೀಪ್ ಡಿಕುನ್ಹಾ ಉಪಸ್ಥಿತರಿದ್ದರು.
ನೋಬರ್ಟ್ ಪಿರೇರಾ ಕಾರ್ಯಕ್ರಮ ನಿರ್ವಹಿಸಿದರು.
Next Story





